Posted by: pavankir | ಮೇ 9, 2010

ಮಾತೆಗೆಣೆಯಾರು ಜಗದೊಳಗೆ….!!!

“ಮಾತಾಕಿಲ ಮನುಷ್ಯಾಣಾಮ್ ದೇವತಾನಾಮ್ ಚ ದೈವತಂ” – ಇದು ಬಾಸ ಕವಿ ವಾಣಿ, ಎಂದರೆ ತಾಯಿ ಮಾನವರಿಗೆ ದೇವತೆಗಳಿಗಿಂತ ಮಿಗಿಲಾದ ದೇವತೆ. ನಿಜಕ್ಕೂ ಸತ್ಯ. ತಾಯ ಬಣ್ಣಿಸಲುಂಟೆ ಜಗದೊಳಗೆ. ತಾಯಿಗೆ ತಾಯಿಯೇ ಸಾಟಿ. ಆರು ಸಲ ಭೂಮಿಯನ್ನು ಪ್ರದಕ್ಷಿಣೆ ಮಾಡಿ, ಮತ್ತಾರು ಸಲ ಕಾಶಿ ಯಾತ್ರೆಯನ್ನು ಮಾಡಿ, ನೂರು ಸಲ ರಾಮೇಶ್ವರ ಸೇತು ಸ್ನಾನವನ್ನು ಮಾಡಿ ಪಡೆಯ ಬಹುದಾದ ಚಾರುತರ ಸತ್ಫಲವನ್ನು ಒಂದು ಬಾರಿ ತಾಯಿಗೆ ನಮಿಸುವುದರಿಂದ ಪಡೆಯಬಹುದೆಂದು ಶಾಸ್ತ್ರಗಳು ಸಾರುತ್ತವೆ.

 

ನಿನ್ನ ನಗುವೆ ನನ್ನ ಅಹಾರ...!!!

ವೇದಗಳಿಂದ ಹಿಡಿದು ಗಾದೆಗಳವರೆಗೆ ಎಲ್ಲವೂ, ಎಲ್ಲರೂ ತಾಯಿಯ ಹಿರಿಮೆಯನ್ನು ಸಾರಿ ಸಾರಿ ಬಿತ್ತರಿಸಿವೆ. ತಾಯ ನೆನೆದು, ತಾಯಿ ತೋರುವ ಪ್ರೀತಿಗಾಗಿ ಮಿಡಿದು, ತಾಯ ವಾತ್ಸಲ್ಯ ಧಾರೆಯನ್ನು ಹಂಬಲಿಸಿ, ಅಮ್ಮನ ಬಗೆಗಿನ ಎದೆಯಾಳದ ಎರಡು ಮಾತನ್ನು ನಿಮ್ಮ ಮುಂದಿಡುವ ಪ್ರಯತ್ನ ಮಾಡಿದ್ದೇನೆ. ಆದರದಿಂದ ಸ್ವೀಕರಿಸಿ ಆಶೀರ್ವದಿಸಿ.

  1.  ಎಂದಿನಂತಿನ ಒಂದು ಸಂಜೆ ಜೋರಾಗಿ ಮಳೆ ಸುರಿಯಲಾರಂಭಿಸಿತ್ತು. ಮಳೆಯಲ್ಲಿ ನೆನೆಯುತ್ತಲೇ ಮನೆಗೆ ಬಂದ ಏಳು ವರ್ಷದ ಮಗನನ್ನು ಕಂಡು “ನಿನಗೆ ಕೊಡೆ ತೆಗೆದುಕೊಂಡು ಹೋಗಲು ಏನಾಗಿತ್ತು, ನೀನೇನು ಚಿಕ್ಕ ಮಗುವೇ?…ನಿನ್ನನ್ನು ಮುದ್ದು ಮಾಡಿದ್ದು ಅತಿಯಾಯ್ತು.” ತಂದೆಯ ಬೊಬ್ಬಾಟ. “ಕೊಡೆಯಿರುವ ಗೆಳೆಯನ ಜೊತೆ ಬರಲಾಗುತ್ತಿರಲ್ಲಿಲ್ಲವೇನೋ?” ಅಕ್ಕನ ಹಿತವಚನ. “ಮಳೆ ಬಿಡುವವರೆಗೆ ಕಾದು ಕುಳಿತು ಮತ್ತೆ ಬರಬಹುದ್ದಿತ್ತಲ್ಲವೇ?” ಅಜ್ಜನ ಅಂಬೋಣ. “ಮಗುವುಗೇನು ಗೊತ್ತು, ಒಂದು ದಿನ ಮಳೆಯಲ್ಲಿ ನೆನೆದರೆ ಏನಾಗುತ್ತದೆ?” ಅತ್ತೆಯ ಅವಲತ್ತು. ಯಾವುದೇ ಸದ್ದಿಲ್ಲದೇ, ಯಾರ ಮಾತಿಗೂ ಗಮನ ಕೊಡದೆ, ಯಾರ ಅಪ್ಪಣೆ ಅನುಮತಿಗೂ ಕಾಯದೆ, ಟವಲ್ನೊಂದಿಗೆ ಬಂದ ಅಮ್ಮ ಮಗನ ಒದ್ದೆಯಾದ ಕೂದಲನ್ನೂ ಮೈಯನ್ನು ಒರೆಸುತ್ತಾ ನುಡಿದಳ೦ತೆ, “ನನ್ನ ಮಗ ಮನೆ ಸೇರುವವರೆಗೆ ಕಾದಿದ್ದರೆ ಏನಾಗುತ್ತಿತ್ತು?, ಮಗನನ್ನು ಒದ್ದೆ ಮಾಡುವಷ್ಟು ಕೆಟ್ಟತನವೇ.. ಈ ಕೆಟ್ಟ ಮಳೆಗೆ, ……” ಇನ್ನೂ ಬೈಯುತ್ತಿದ್ದಳು ಸುರಿದ ಮಳೆಗೆ. – ಇದು ನಮ್ಮ ನಿಮ್ಮೆಲ್ಲರ ಅಮ್ಮ. ಯಾವುದಿದೆ ನಿನ್ನ ಪ್ರೀತೆಗೆ ಹೋಲಿಕೆ.ಅಮ್ಮಾ.. ನಿನಗೆ ಕಣ್ಣ ಹನಿಗಳೆ ಕಾಣಿಕೆ.

  2.  ಮನೆಯಲ್ಲಿರುವ ಮಂದಿಗಳು ನಾಲ್ಕಾದರೆ, ತಂದಿರುವ ತಾಜಾ ಮಾವಿನ ಹಣ್ಣುಗಳು ಮೂರಾದರೆ, ಅಮ್ಮನ ಉತ್ತರವೊಂದೇ “ನನಗೆ ಮಾವಿನ ಹಣ್ಣು ಸೇರದು, ರುಚಿಸದು ಮೇಲಾಗಿ ತಿಂದರೆ ಮೈಗೆ ಹತ್ತದು. ನೀವೆಲ್ಲಾ ತಿನ್ನಿ, ನನಗದು ಬೇಡ.” – ಅಮ್ಮ ನಿನ್ನ ತ್ಯಾಗಕ್ಕೆ, ಪ್ರೀತಿಗೆ ಏನೆಂದು ಹೇಳಲಿ. ಸದಾ ನಿನ್ನ ಮಡಿಲೊಳಗಿರುವೆನೆಂಬುದ ಬಿಟ್ಟು ಬೇರೇನನ್ನೂ ನುಡಿಯಲಾರೆ… ಮಾ ತುಜೇ ಸಲಾಮ್.

  3.  ಒಂದೊಮ್ಮೆ ಭೂಮಿಗೆ ಬರುವುದಕ್ಕೆ ಸನ್ನದ್ದವಾದ ಮಗು ತಾಣಗರಿವಿಲ್ಲದ ಇನ್ನೊಂದು ಲೋಕಕ್ಕೆ ಹೋಗಲ್ಲೊಲ್ಲದೆ ಭಗವಂತನಲ್ಲಿ ನೆಡೆಸಿದ ಸಂವಾದ ಹೀಗಿದೆ.

ಮಗುವಿನ ಪ್ರಶ್ನೆ – ಇಷ್ಟು ಚಿಕ್ಕ ನಾನು ಕಾಣದ ಅಜ್ಞಾತ ಲೋಕಕ್ಕೆ ಹೇಗೆ ಹೋಗಲಿ, ಅಲ್ಲಿ ನನ್ನನ್ನು ನೋಡಿಕೊಳ್ಳುವರಾರು?
ದೇವರ ಉತ್ತರ – ನಿನ್ನ ನಿರೀಕ್ಷೆಯಲ್ಲಿರುವ ಒಂದು ದೇವತೆ ಈಗಾಗಲೆ ಭೂಮಿಯಲ್ಲಿದೆ. ಏನೂ ಚಿಂತೆ ಬೇಡ.
ಪ್ರ – ಅಲ್ಲಿನ ಬಾಷೆ ನನಗರಿವಿಲ್ಲ.. ನಾನೇನು ಮಾಡಲಿ?
ಉ – ಅಲ್ಲಿರುವ ದೇವತೆ ನಿನಗಾಗಿ ಮಧುರವಾಗಿ ಹಾಡಿ, ತೊದಲ್ನುಡಿಯಿಂದ ನಿನಗೆ ಅಲ್ಲಿನ ಬಾಷೆ ಕಲಿಸಿ ಕೊಡುತ್ತದೆ.
ಪ್ರ – ನನಗೆ ನಿನ್ನಲ್ಲಿ ಮತಡ ಬೇಕೆನಿಸಿದರೆ, ನಾನೆನು ಮಾಡಲೇ?
ಉ – ನಿನ್ನ ದೇವತೆ ನಿನ್ನೆರಡು ಕಾರಗಳನ್ನು ಜೋಡಿಸಿ ನಿನಗೆ ಪ್ರಾರ್ಥಿಸಲು ಕಲಿಸಿ ಕೊಡುತ್ತದೆ.
ಪ್ರ – ನಾನು ಕೇಳಿದ್ದೇನೆ, ಆ ಅಜ್ಞಾತ ಲೋಕದಲ್ಲಿ ಕೆಟ್ಟ ಜನರಿದ್ದಾರಂತೆ, ನಾನೇನು ಮಾಡಲಿ?
ಉ – ನಿನ್ನ ದೇವತೆ ನಿನ್ನನ್ನು ತನ್ನ ಪ್ರಾಣವನ್ನಾದರೂ ಕೊಟ್ಟು ರಕ್ಷಿಸುತ್ತದೆ.. ಚಿಂತೆ ಬೇಡ
ಪ್ರ – ಸರಿ..ಸರಿ.. ಆದರೆ ಆ ನನ್ನ ದೇವತೆಯ ಹೆಸರೇನು? ಆ ದೇವತೆಯನ್ನು ನಾನು ಹೇಗೆ ಗುರುತಿಸಲಿ?
ಉ – ಎಲೆ ಕಂದ, ಆ ನಿನ್ನ ದೇವತೆಯ ಹೆಸರು ……. ಅಮ್ಮ

 ಅಮ್ಮಾ….! ನಿನ್ನ ಬಣ್ಣಿಸಲು ನನಗೆ ಶಬ್ದಗಳು ಸಿಗದು. ಸಾವಿರ ಸಾವಿರ ಶಬ್ದಗಳಲ್ಲಿ ಹೇಳಲಾಗದ್ದನ್ನು ಒಂದು ಭಾವ ಪೂರ್ಣ ನೋಟ ಅರ್ಥೈಸಿ ಕೊಡುತ್ತದಂತೆ. ಒಂದೆರಡು ಕಣ್ಣ ಹನಿಗಳ ಮೂಲಕ ಹೇಳುತ್ತಿದ್ದೇನೆ “ಅಮ್ಮ ನಾ ನಿನ್ನ ಮಗನಮ್ಮ. ನಿನ್ನ ಪ್ರೀತಿಯನ್ನು ಮೊಗೆದುಣುವ ನಿನ್ನ ಮಗನಮ್ಮಾ…..!!!”

Advertisements

Responses

  1. nange gothithu ninu chennagi mathadthya antha istu chennagi bareyokku barotha gud keep the gud work going
    Amma nijavagalu entha adbuthavada shabdha it is very aptly said that God cannot be everywhere that is why he sent mothers

  2. thank you Anu..thanks for your support

  3. Good One Pavan Anna very good . God Bless u.


ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

ವಿಭಾಗಗಳು

%d bloggers like this: