Posted by: pavankir | ಮೇ 4, 2009

ತಂದೆ ತಾಯ ಒಮ್ಮೆ ನೆನೆದು…

ನಾನು ನೀವು, ಎಲ್ಲರೂ ಕೇಳಿದ, ತಿಳಿದ ಕತೆಯೇ ಇದು. ಆದರೂ ಮತ್ತೊಮ್ಮೆ ಇಲ್ಲಿ ಪ್ರಸ್ತಾಪಿಸುತ್ತಿದ್ದೇನೆ.

ಸುಮಾರು ಮೂವತ್ತರ ಆಸುಪಾಸಿನ ಮಗ ಪೇಪರ್ ಓದುತ್ತಿರುತ್ತಾನೆ. ಅಲ್ಲಿಯೇ ಪಕ್ಕದಲ್ಲಿ ಕುಳಿತ ಅರವತ್ತರ ಹರೆಯದ ತಂದೆ ಆಗತಾನೆ ಕಿಟಕಿಯಲ್ಲಿ ಬಂದು ಕುಳಿತ ಕಾಗೆಯನ್ನು ತೋರಿಸಿ ಮಗನಲ್ಲಿ ಪ್ರಶ್ನಿಸುತ್ತಾರೆ, “ಮಗನೆ ಅದೇನು ಕಿಟಕಿಯಲ್ಲಿ ಕುಳಿತಿರುವುದು?”. ಪೇಪರ್ನಲ್ಲೆ ಮುಖವಿರಿಸಿದ್ದ ಮಗ ಮೊಗವೇತ್ಟಿ ನೋಡಿ ಉತ್ತರಿಸುತ್ತಾನೆ, ” ಅದು ಕಾಗೆಯಲ್ವಾ ಅಪ್ಪ”. ಮತ್ತರೆಗಳಿಗೆ ಕಳೆಯುವುದರೊಳಗೆ ಅಪ್ಪನಾಡು ಅದೇ ಪ್ರಶ್ನೆ,”ಅದೇನು ಕಿಟಕಿಯಲ್ಲಿ ಕುಳಿತಿರುವುದು?”. ವಿಚಿತ್ರ ಮುಖಭಾವದೊಂದಿಗೆ ಮಗ ಮತ್ತೆ ಉತ್ತರಿಸುತ್ತಾನೆ, “ಅದು ಕಾಗೆ ಅಪ್ಪ”. ಒಂದೆರಡು ನಿಮಿಷ ಕಳೆಯುವುದರಲ್ಲಿ ಅಪ್ಪನದ್ದು ಮತ್ತದೇ ಪ್ರಶ್ನೆ, “ಅದೇನು ಕಿಟಕಿಯಲ್ಲಿ ಕುಳಿತಿರುವುದು?”. ಸ್ವಲ್ಪ ಉದ್ವಿಗ್ನನಾಗಿ ಮಗ ಉತ್ತರಿಸುತ್ತಾನೆ, “ಯಾಕಪ್ಪ, ಅದು ಕಾಗೆ, ಅರ್ಥ ಆಯ್ತಾ?”. ಮಗ ಉತ್ತರ ಪೂರ್ಣಗೊಳಿಸುವ ಮುನ್ನವೇ ಅಪ್ಪ ಮತ್ತೆ ಪ್ರಶ್ನಿಸುತ್ತಾನೆ.”ಅದೇನು ಕಿಟಕಿಯಲ್ಲಿ ಕುಳಿತಿರುವುದು?”. ಸಹನೆ ಕಳೆದುಕೊಂಡ ಮಗ ಕೈಯಲ್ಲಿದ್ದ ಪೇಪರನ್ನು ಎಸೆದು ಸಿಡುಕುತ್ತಾನೆ, “ಒಂದು ಸತಿ ಹೇಳಿದ್ರೆ ಅರ್ಥ ಆಗೋಲ್ವ, ಅದು ಕಾಗೆ ಅಂತ, ತಲೆ ಕೆಟ್ಟಿದ್ಯಾ ನಿಂಗೆ, ಹೋಗು ಇಲ್ಲಿಂದ ಸುಮ್ನೇ ನನ್ನ ತಲೆ ತಿನ್ಬೇಡ”. ಒಳಗೆದ್ದು ಹೋದ ತಂದೆ ಅರೆಗಳಿಗೆಯಲ್ಲಿ ಹಿಂತಿರುಗಿ ಬಂದು ಮಗನ ಕೈಯಲ್ಲಿ ಹಳೆಯ ಡೈರಿಯನ್ನು ಇಡುತ್ತಾನೆ. ಅರ್ಥವಾಗದ ಮಗ ಡೈರಿಯನ್ನು ಒದುತ್ತಾನೆ – ” ಇಂದು ನಾನು ಮತ್ತು ನನ್ನ ನಾಲ್ಕು ವರ್ಷದ ಮಗ ಹೊರಗಡೆ ಕುಳಿತಿರುವಾಗ, ನನ್ನ ಮಗ ಕಾಗೆಯನ್ನು ನೋಡಿ ಅದೇನೆಂದು ಇಪ್ಪತ್ತಾರು ಬಾರಿ ಪ್ರಶ್ನಿಸಿದ, ಅವನ ಪ್ರಶ್ನೆಗೆ ನಾನು ಇಪ್ಪತ್ತಾರು ಬಾರಿಯೂ ತಾಳ್ಮೆಯಿಂದ ಉತ್ತರಿಸಿದೆ, ಏಕೆಂದರೆ ಅವನದ್ದು ಕಲಿಯುವ ವಯಸ್ಸು, ಮತ್ತು ನನಗೆ ಅವನ್ನನ್ನು ಪ್ರೀತಿಸುವ ಹುಮ್ಮಸ್ಸು”. ಓದಿದ ಮಗನ ಕಣ್ಣಲ್ಲಿ ನೀರಿಳಿಯುತ್ತದೆ.

ಗೆಳೆಯರೆ, ಈ ಕತೆಯನ್ನು ನಾನಿಲ್ಲಿ ಪ್ರಸ್ತಾಪಿಸಿರುವ ಉದ್ದೇಶ ನಿನ್ನೆ ಮೊನ್ನೆಯಷ್ಟೇ ನಾನು ಕಂಡ ಘಟನೆ. ಒಂದು ವೃದ್ಧಶ್ರಮದ ಎದುರಲ್ಲಿ ನಿಂತಿದ್ದ ರಿಕ್ಷದಿಂದ ಕೆಳಗಿಳಿದ ಸುಮಾರು ಅರವತ್ತರ ವಯಸ್ಸಿನ ತಂದೆ ವೃದ್ಧಾಶ್ರಮಕ್ಕೆ ಹೋಗಲಾರೆ ಎಂದು ಅಳುತ್ತಾ ಕೈ ಮುಗಿಯುತ್ತಿದ್ದರು, ಮಗ ಹೆದರಿಸಿ ಒಳ ಹೋಗುವಂತೆ ಒತ್ತಾಯಿಸುತ್ತಿದ್ದರು. ಇದನ್ನು ಕಂಡು ಮನಸ್ಸು ಮುದುಡಿತು ಗೆಳೆಯರೆ. ತಾಯಿತಂದೆಯರು ಹೆಗಲಲ್ಲಿ ಹೊತ್ತೊಯ್ದ ಶ್ರವಣನ ನಾಡೇ ನಮ್ಮದು? ನಾಚಿಕೆಯಾಗಬೇಕು. ಒಂಬತ್ತು ತಿಂಗಳು ಹೊತ್ತು ರಕ್ತವನ್ನೇ ಹಂಚಿ ಹಾಲೆರೆದು, ನೋವು ನುಂಗಿ ನಲಿವಿತ್ತ ನಮ್ಮ ತಾಯಿತಂದೆಯರು ನಮಗೆ ಬಾರ.

ಆಸರೆಯ ಕೈಯ ನಿರೀಕ್ಷೆಯಲ್ಲಿ...

ಆಸರೆಯ ಕೈಯ ನಿರೀಕ್ಷೆಯಲ್ಲಿ...

ಕೇವಲ ಮಾಂಸದ ಮುದ್ದೆಯಾಗಿ ಭೂಮಿಗಿಳಿದ ನಮಗೆ ದೇಹ ಶಕ್ತಿಯನ್ನು, ಧೀ ಶಕ್ತಿಯನ್ನು ನೀಡಿ ನಿಜವಾದ ಅರ್ಥದಲ್ಲಿ ಮನುಷ್ಯನನ್ನಾಗಿಸುವುದು ನಮ್ಮ ಹೆತ್ತವರು. “ಕುಪುತ್ರೋ ಜಾಯೇತ್, ಕ್ವಚಿದಪಿ ಕುಮಾತಾ ನ ಭವತಿ” ಎಂದು ಶಂಕರಾಚಾರ್ಯರು ಹೇಳಿದ್ದಾರೆ, ಅರ್ಥಾತ್ ಪ್ರಪಂಚದಲ್ಲಿ ಯಾವಾಗಲೂ ಕೆಟ್ಟ ಮಕ್ಕಳು ಹುಟ್ಟುತ್ತಾರೆ ಆದರೆ ಸರ್ವತಾ ಕೆಟ್ಟ ತಾಯಿ ತಂದೆಯರು ಸಿಗಲಾರರು. ಮಾತೃದೇವೋಭವ, ಪಿತೃದೇವೋಭವ, ಎಂದು ಸಾರಿದ ನಮ್ಮ ನೆಲದ ಫಸಲುಗಳೇ ನಾವು? ನಮ್ಮ ಮಾತು ಏನಿದ್ದರೂ ಇನ್ನೊಬ್ಬರಿಗೆ ಬೋದಿಸಲು ಮಾತ್ರ. ಇಲ್ಲಿ ಚಿಂತಿಸಬೇಕಾದ್ದದ್ದು ಏನು?, ನಮ್ಮ ಈ ಸಾಂಸ್ಕೃತಿಕ ದಿವಾಳಿತನಕ್ಕೆ ಕಾರಣವೇನು?

ಗೆಳೆಯರೆ, ಎಲ್ಲೋ ಏನೋ ನಾವು ತಪ್ಪುತ್ತಿದ್ದೇವೆ. ಹುಟ್ಟಿದ ಮಕ್ಕಳಿಗೆ ವರ್ಷ ಮೂರಾಗುವುದರೊಳಗೆ ನರ್ಸರಿ ಯ ಶಾಲೆಯೆಂದು ಕಳುಹಿಸಿ, ತಾಯಿ ತಂದೆಯರು ದುಡಿಯಲು ಹೊರಟು ಬಿಡುತ್ತೇವೆ. ಮಕ್ಕಳಿಗೆ ನಾವು ಸಿಗುವುದು ವಾರಾಂತ್ಯದಲ್ಲಿ ಮಾತ್ರ. ಮಕ್ಕಳ ನಮ್ಮ ಅನುಬಂಧವಿರಿವುದು ಪಾಕೆಟ್ ಮನಿಯಲ್ಲಿ ಮಾತ್ರ. ನಮ್ಮ ಮಕ್ಕಳು ನಮ್ಮನ್ನು ಚಿತ್ರಿಸುವುದು ದುಡಿಯುವ ಎರಡು ಯಂತ್ರದಂತೆ. ಕೆಲಸಕ್ಕೆ ಬಾರದ, ಹಳೆಯ ಯಂತ್ರಗಳನ್ನು ಗುಜರಿಯವನಿಗೆ ಕೊಡುವುದು ಸರಿಯಷ್ಟೆ? ಕೇಜಿಯಿಂದ ಪಿಜಿವರೆಗೆ ಬೋದಿಸುವ ಶಿಕ್ಷಣ ನೀತಿಯನ್ನು ಬೋದಿಸುವಲ್ಲಿ ವಿಪಲವಾಗಿರುವುದು ಖೇದನೀಯ. ಪ್ರಾಸಪೂರ್ಣ ಇಂಗ್ಲೀಷ್ ಪದ್ಯವನ್ನು ಸರಾಗವಾಗಿ ಹೇಳಬಲ್ಲ ನಮ್ಮ ಮಕ್ಕಳಿಗೆ ಶ್ರವಣನ ಪರಿಚಯವಿಲ್ಲ. ಪಿತೃ ವಾಕ್ಯ ಪರಿಪಾಲಕ ಕೋದಂಡ ರಾಮನ ನೆನಪಿಲ್ಲ. ವ್ಯಕ್ತಿ ವ್ಯಾವಹಾರಿಕವಾಗಿ ಬೆಳೆದು ವಿಶ್ವಗ್ರಾಹಿಯಾಗುವುದು ಜೀವನದ ಸಾದನೆಯಲ್ಲ, ನೈತಿಕವಾಗಿ ಬೆಳೆದು ವಿಶ್ವ ಮಾನ್ಯನಾಗುವುದೇ ನಿಜವಾದ ಸಾದನೆ. ಪ್ರೀತಿ, ಕರುಣೆ, ವಾತ್ಸಲ್ಯ, ಬಾಂದವ್ಯ, ಅನುಬಂಧ, ಇತ್ಯಾದಿ ಶಬ್ದಗಳು ಕೇವಲ ಪುಸ್ತಕದ ಕಂತೆಯಾಗದೆ ನಮ್ಮ ಬದುಕಿನ ಕತೆಯಾಗುವತ್ತ ಚಿಂತಿಸುವ ಅನಿವಾರ್ಯತೆಯಿದೆ.

ಕೇವಲ ಬಾಯ್ತಾಂಬೂಲದ ಆಸೆಗಾಗಿ ಹೆತ್ತ ತಾಯ ಸೆರಗನ್ನು ವಿಕೃತ ಕಾಮಿಯ ಕರಕ್ಕೊಪ್ಪಿಸುವ ನೈತಿಕ ಅದಃಪತನ ಘಟಿಸುವ ಮುನ್ನ ಮಾಯಾ ನಿದ್ದೆ ಬಿಟ್ಟು ಮೇಲೇಳೋಣ ಗೆಳೆಯರೆ. ಭಾಸಕವಿ ವಾಣಿ ಸಾರುತ್ತದೆ, “ಮಾತಾಕಿಲ ಮನುಷ್ಯಾಣಾಮ್ ದೇವತಾನಾಮ್ ಚ ದೈವತಂ”, ಅರ್ಥಾತ್ ತಾಯಿ ಮನುಷ್ಯರಿಗೆ ದೇವರಿಗಿಂತ ಮಿಗಿಲಾದ ದೇವರು. ಅಂಬರದಲ್ಲಿ ಇರುವ ಗ್ರಹಗಳನ್ನು ಅದ್ಯಯನ ಮಾಡುವುದು ದೊಡ್ಡ ವಿಷೇಷವಲ್ಲ, ಅಂಗುಟಾಕಾರದ ನಮ್ಮ ಆತ್ಮವನ್ನು ವಿಮರ್ಷೆ ಮಾಡುವುದೇ ಅತಿದೊಡ್ಡ ಸಾದನೆ. ಈ ನಿಟ್ಟಿನಲ್ಲಿ ನಮ್ಮೊಳಗಿರುವ ನಮ್ಮನ್ನು ಜಾಗೃತಗೊಳಿಸೋಣ ಗೆಳೆಯರೆ. ನಿಮ್ಮ ಅಭಿಪ್ರಾಯದ ನಿರೀಕ್ಷೆಯಲ್ಲಿ………

Advertisements

Responses

  1. Good artical Pavan. God bless u.

  2. ಒಳ್ಳೆಯ ಬರವಣಿಗೆ. ಆದರೆ ಅದನ್ನು ಓದಿ ಖುಷಿಪಡಬೇಕೋ ದುಖಃ ಪಡಬೇಕೋ ಎನ್ನುವ ಸಂದಿಗ್ಧತೆಯನ್ನು ಉಂಟು ಮಾಡುವಂತಹ ವಿಷಯ. ಹೌದು ನಾವು ಎಲ್ಲೋ ತಪ್ಪುತ್ತಿದ್ದೇವೆ. ಆದರೆ ಅದನ್ನು ಸರಿಪಡಿಸಲು ಒಬ್ಬಮಹಾತ್ಮ ಬರಬೇಕೆಂದು ಕಾಯುವುದರಲ್ಲಿ ಅರ್ಥವಿಲ್ಲ. ನಮ್ಮ ಕೈಲಾದ್ದು ನಾವು ಮಾಡೋಣ. ಮಿಕ್ಕಿದ್ದನ್ನು ಕಾಲಕ್ಕೆ ಬಿಡೋಣ.

  3. ಲೇಖನ ಸಕಾಲಿಕವಾಗಿದೆ ಮತ್ತು ನಾವೆಲ್ಲರೂ ಕಣ್ತೆರದು ನೋಡಿ, ಯೋಚಿಸುವಂತೆ ಮಾಡುವಲ್ಲಿ ಯಶಸ್ವಿಯಾಗಿದೆ.

    ನಮ್ಮ ಇವತ್ತಿನ ಮನಸ್ಥಿತಿ ಹಾಗೂ ನಮ್ಮ ಶಿಕ್ಷಣ ವ್ಯವಸ್ಥೆ ಎಷ್ಟು ಕಾರಣಿಭೂತವಾಗಿದೆ, ಮತ್ತು ನಾವು ಎಡವಿದ್ದೆಲ್ಲಿ ಎಂಬುದನ್ನು ಎತ್ತಿ ತೋರುತ್ತಿದೆ ನಿಮ್ಮ ಲೇಖನ.

    ನಾವೆಲ್ಲರೂ ಯೋಚಿಸಬೇಕು…

    -ಶೆಟ್ಟರು

  4. its very good articale please increase font size….


ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

ವಿಭಾಗಗಳು

%d bloggers like this: