Posted by: pavankir | ಏಪ್ರಿಲ್ 8, 2009

ಪರಮ ಭಕ್ತಿಯ ಸೆಲೆ…. ಬ್ರಾಹ್ಮೀ ನೆಲೆಸಿರುವ ಕಮಲಶಿಲೆ….

ಶ್ರೀ ಬ್ರಾಹ್ಮೀ ದುರ್ಗಾ ಪರಮೇಶ್ವರಿ ಅಮ್ಮನವರು

ಶ್ರೀ ಬ್ರಾಹ್ಮೀ ದುರ್ಗಾ ಪರಮೇಶ್ವರಿ ಅಮ್ಮನವರು

ಇದೇ ಬರುವ 12.04.09 ರಿಂದ 17.04.09 ರ ವರೆಗೆ ಷ್ರೀ ಕ್ಶೇತ್ರ ಕಮಲಶಿಲೆಯಲ್ಲಿ ಶ್ರೀಮನ್ಮಹಾರಥೋತ್ಸವ ನೆಡೆಯಲಿದೆ. ದಿನಾಂಕ 12.04.09 ರಂದು ದ್ವಜಾರೋಹಣ, ಅಂಕುರಾರೋಪಣ, ಭೇರಿ ತಾಡನ, ಯಾಗ ಶಾಲ ಪ್ರವೇಶ, ಕೌತುಕ ಬಂಧನ, ಶಿಬಿತಾಯನೋತ್ಸವದೊಂದಿಗೆ ಆರಂಭಗೊಂಡು 13.04.09ರಂದು ಸಿಂಹವಾಹನೋತ್ಸವ, 14.04.09ರಂದು ಪುಷ್ಪಕ ವಾಹನೋತ್ಸವ, ರಂಗ ಪೂಜೆ, 15.04.09ರಂದು ಸುಲಗ್ನದಲ್ಲಿ ಶ್ರೀ ಮನ್ಮಹಾರಥೋತ್ಸವ, 16.04.09ರಂದು ಚೂರ್ಣೋತ್ಸವ, ಮತ್ತು 17.04.09ರಂದು ಮೃಗಯಾ ವಿಹಾರ, ಪೂರ್ಣಾಹುತಿ, ದ್ವಜಾವರೋಹಣ, ಕುಂಭಾಭಿಷೇಕದೊಂದಿಗೆ ಶ್ರೀ ಮನ್ಮಹಾರಥೋತ್ಸವವು ಪೂರ್ಣಗೊಳ್ಳಲಿರುವ ಹಿನ್ನೆಲೆಯಲ್ಲಿ, ಸರ್ವ ಸಹೃದಯೀ ಸಜ್ಜನ ಬಂಧುಗಳನ್ನು ಶ್ರೀ ಕ್ಶೇತ್ರ ಕಮಲಶಿಲೆಗೆ ಆಹ್ವಾನಿಸುತ್ತಾ, ಶ್ರೀ ಕ್ಷೇತ್ರದ ಪರಿಚಯಾತ್ಮಕ ಲೇಖನ ನಿಮ್ಮ ಮುಂದೆ….

 

ಮಾನವನ ಬದುಕು ರಸಮಯವಾಗಲು ಕೇವಲ ಬೌತಿಕ ಸಂಪತ್ತಷ್ಟೇ ಸಾಲದು, ದೈವೀ ಸಂಪತ್ತೂ ಅವಶ್ಯಕ. ಈ ದೈವಿಕ ಸಂಪತ್ತನ್ನು ಗಳಿಸಲು ಅವಶ್ಯಕವಾಗಿರುವ ಸಾಧನ ಭಕ್ತಿ. ಭಕ್ತಿಯ ಭಾವವು ಮನುಷ್ಯನಿಗೆ ಸಹಜವು ಸುಂದರವು, ಹಾಗೂ ಶ್ರೇಯಸ್ಕರವೂ ಆದುದಾಗಿದೆ. ಪರಮ ಪ್ರೇಮರೂಪವೇ ಭಕ್ತಿ. ಪರಮಾತ್ಮನಲ್ಲಿ ಅನುರಕ್ತಿ ಗಾಢವಾದರೆ ಅದೇ ಭಕ್ತಿ. ಭಕ್ತಿ ಅನುರಾಗ ಲೋಕವನ್ನು ಸೂರೆಗೊಳ್ಳುವ ಭಾವ ಲಹರಿ. ಆದ್ದರಿಂದಲೇ ತತ್ವ ಕ್ಷೇತ್ರದಲ್ಲಿ ಭಕ್ತಿಗೆ ಬಹಳ ಮಹತ್ವವನ್ನು ಕೊಟ್ಟಿರುವುದು. ಇಂತಹ ಭಕ್ತಿಯನ್ನು ಶಾಶ್ವತನು, ಆಚ್ಯುತನು, ಅನನ್ಥನೂ ಆದ ಪರಮಾತ್ಮನಲ್ಲಿ ನಿವೇದನೆ ಮಾಡಿದಾಗ ಭಕ್ತ ಸುಪ್ರೀತನಾಗುತ್ತಾನೆ, ಹಾಗೆಯೇ ಭಗವಂತ ಭಕ್ತನ ಹೃದಯ ಮಂದಿರದಲ್ಲಿ ತಾನೇ ಸ್ವಯಂ ಇಚ್ಛೆಯಿಂದ ಬಂದಿತನಾಗುತ್ತಾನೆ. ಶಕ್ತಿ ದೇವತೆಯ ಆರಾಧನೆ ವೇದೋಕ್ತವಾಗಿರುವ ಪರಮ ಭಕ್ತಿಯ ನಿವೇದನೆ. ತ್ರಿಶಕ್ತಿಯರಾದ ಮಹಾಕಾಳಿ, ಮಹಾಲಕ್ಷ್ಮಿ, ಮತ್ತು ಮಹಾಸರಸ್ವತಿಯರ ಆರಾಧನೆಯೇ ಶ್ರೀಶಕ್ತಿಯ ಆರಾಧನೆ. ಕಮಲಶಿಲೆಯು ತ್ರಿಶಕ್ತಿಯರ ಸಹಿತ ಆದಿಶಕ್ತಿಯು ನೆಲೆಸಿರುವ, ಆರಾದನೆಗೆ ಶ್ರೇಷ್ಟವಾದ ಶ್ರೀಶಕ್ತಿ ಕ್ಷೇತ್ರ. ಆಸ್ತಿಕರಿಗೆ ಭಕ್ತಿಯ ನೆಲೆಯಾದರೆ, ನಾಸ್ತಿಕರಿಗೆ ಮನ ಸೆಳೆಯುವ ಪ್ರಕೃತಿ ಸೌಂದರ್ಯದ ಸೆಲೆ.

ಉಡುಪಿ ಜಿಲ್ಲೆ ಕುಂದಾಪುರ ತಾಲುಕಿನ ಸಿದ್ದಾಪುರದಿಂದ ಸುಮಾರು 6 ಕಿ ಮಿ ದೂರದಲ್ಲಿರುವ ಕಮಲಶಿಲೆಯು ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿಯ ನೆಲೆ. ನದಿ ಕುಬ್ಜೆಯ ಸೆಲೆ. ಬಹುಕಾಲದ ಹಿಂದೆ ಪಿಂಗಳೆ ಎಂಬ ಹೆಸರಿನ ನರ್ತಕಿ ಕೈಲಾಸದಲ್ಲಿ ನರ್ತಿಸುತ್ತಿದ್ದು, ಅವಳು ತನ್ನ ಸೌಂದರ್ಯ ಮದದಿಂದಾಗಿ ಹರನನ್ನು ನಿಂದಿಸಲು, ಕೋಪಗೊಂಡ ಪಾರ್ವತಿ, ಭೂಮಿಯಲ್ಲಿ ಅಂಕು ಡೊಂಕಿನ ಕುಬ್ಜೆಯಾಗಿ ನದಿರೂಪದಲ್ಲಿ ಜನಿಸುವಂತೆ ಶಾಪವಿತ್ತಳ0ತೆ. ಈ ರೀತಿ ನದಿರೂಪದಲ್ಲಿ ಭೂಮಿಗೆ ಬಂದ ಕುಬ್ಜೆಯ ಸಲಿಲದಲ್ಲಿ ಖರ – ರಟ್ಟರೆಂಬ ದೈತ್ಯರನ್ನು ವಧಿಸಿ ಪರಮೇಶ್ವರಿಯು ಜ್ಯೋತಿರ್ಲಿಂಗ ಸ್ವರೂಪಿಣಿಯಾಗಿ ನೆಲೆಸಿದಳೆಂದೂ, ಮುಂದೆ ಮಹಾಕಾಳೀ, ಮಹಾಲಕ್ಷ್ಮೀ, ಮಹಾಸರಸ್ವತಿಯರ ಏಕರೂಪವಾಗಿ ಆದಿಶಕ್ತಿಯು ಬ್ರಾಹ್ಮೀ ದುರ್ಗಾಪರಮೇಶ್ವರೀ ಎಂಬ ಹೆಸರಿನಿಂದ ಕಾಣಿಸಿಕೊಂಡು ವರಬಲದಿಂದ ಮೆರೆಯುತ್ತಿದ್ದ ಕ್ರೂರಾಕ್ಷನೆಂಬ ದಾನವನನ್ನು ಕೊಂದು ಕುಬ್ಜಾ ನದಿ ತೀರದಲ್ಲಿದ್ದ ಜ್ಯೋತಿರ್ಲಿಂಗದಲ್ಲಿ ಐಕ್ಯಳಾದಳು ಎಂದು ಸ್ಕಾಂದವೇ ಮೊದಲಾದ ಪುರಾಣಗಳಿಂದ ತಿಳಿಯುತ್ತದೆ.

ಐತಿಹಾಸಿಕವಾಗಿ ಕೆಳದಿ, ಮೈಸೂರು, ವಿಜಯನಗರವೇ ಮೊದಲಾದ ರಾಜವಂಶದವರು ಈ ಕ್ಷೇತ್ರದ ಆಡಳಿತ ನೆಡೆಸಿದ್ದರೆನ್ನುವುದನ್ನು ಶ್ರೀ ದೇವಿಯ ಆಭರಣಗಳಲ್ಲಿರುವ ರಾಜ ಲಾಂಛನದಿಂದ ತಿಳಿದು ಬರುತ್ತದೆ. ಪ್ರಸ್ತುತದಲ್ಲಿ ಹಳ್ಳಿಹೊಳೆ, ಕಮಲಶಿಲೆ, ಆಜ್ರಿ, ಸಿದ್ದಾಪುರ, ಮತ್ತು ಯಡಮೊಗೆ ಗ್ರಾಮಸ್ತರ ಆಡಳಿತದಲ್ಲಿ ಅಭಿವೃದ್ದೀಯನ್ನು ಕಾಣುತ್ತಿದೆ. ಅಗಾಧ ಪೌರಾಣಿಕ ಹಾಗು ಚಾರಿತ್ರಿಕ ಹಿನ್ನೆಲೆಯುಳ್ಳ ಶ್ರೀ ಕ್ಷೇತ್ರವು ಪ್ರಾಕೃತಿಕ ಸೊಬಗಿನಿಂದ ಕೂಡಿದೆ. ಇಲ್ಲಿ ಈಶ್ವರ, ಸುಬ್ರಮಣ್ಯ, ಗಣಪತಿ, ವೀರಬದ್ರ, ಮುಂಡಂತಾಯ, ರಕ್ತೇಶ್ವರ, ಹುಲಿರಾಯ, ಹೊಸಮ್ಮ, ಕುದುರೆ ಬೊಬ್ಬರ್ಯ ಮುಂತಾದ ಪರಿವಾರ ದೇವತೆಗಳಿಂದ ಶ್ರೀ ದೇವಿಯು ಕಂಗೊಳಿಸುತ್ತಿದ್ದಾಳೆ. ಶ್ರೀ ಕ್ಷೇತ್ರದಲ್ಲಿ ದೇವಿಯ ಜ್ಯೊತಿರ್ಲಿ0ಗಕ್ಕೆ ಅಹಿಮಲೆ ಪರ್ವತದಿಂದ ತರುವ ಮಣ್ಣಿನಿಂದ ಮಾಡುವ “ಮೃತ್ತಿಕಾ ಅಷ್ಟಬಂಧ” ಎನ್ನುವ ಸೇವೆ ವಿಶ್ವದಲ್ಲೇ ವಿಶೇಷವಾದುದು. ಚಂಡಿಕಾ ಯಾಗ, ರಂಗ ಪೂಜೆ, ಬೆಳ್ಳಿ ರಥೋತ್ಸವ, ಹೂವಿನತೇರು, ಮೊದಲಾದ ವಿಶೇಷ ಸೇವೆಗಳು ಶ್ರೀ ಕ್ಷೇತ್ರದಲ್ಲಿ ನೆಡೆಯುತ್ತಿದ್ದು, ದೇವಳದ ವತಿಯಿಂದ ಯಕ್ಷಗಾನ ಮೇಳವು ಹಲವಾರು ವರ್ಷಗಳಿಂದ ಸೇವೆ ಗೈಯುತ್ತಿದೆ.

 

ಶ್ರೀ ಕ್ಷೇತ್ರದ ಯಕ್ಷಗಾನ ಮೇಳ

ಶ್ರೀ ಕ್ಷೇತ್ರದ ಯಕ್ಷಗಾನ ಮೇಳ

ದೇವಸ್ಥಾನದ ಸುತ್ತ ಮುತ್ತ ಅವರಿಸಿರುವ ದಟ್ಟಾ ಕಾನನ, ಬೆಟ್ಟಾ ಗುಡ್ಡಗಳು, ಕುಬ್ಜಾ ನದಿ, ಹಾಗು ಕಮಲಶಿಲೆಯಿಂದ 2 ಕಿ. ಮಿ ದೂರದಲ್ಲಿರುವ ಪ್ರಾಚೀನವಾದ ಸುಪಾರ್ಶ್ವ ಗುಹೆ, ಅಲ್ಲಿರುವ ಪುರಾತನವಾದ ದೇವಿಯ ಮೂರ್ತಿ, ಲಿಂಗಗಳು ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿದೆ. ಉತ್ತಮ ಸಾರಿಗೆ ವ್ಯವಸ್ಥೆ, ಊಟ ವಸತಿ ಹೊಂದಿರುವ ಶ್ರೀ ಕ್ಷೇತ್ರವು ಆಸ್ತಿಕರಿಗೆ ಪವಿತ್ರ ಸ್ಥಳವಾಗಿ ನಾಸ್ತಿಕರಿಗೆ ಪ್ರವಾಸಿ ತಾಣವಾಗಿ ಕಣ್ ಮನ ತಣಿಸುತ್ತಿದೆ.

ಸುಪಾರ್ಶ್ವ ಗುಹೆ

ಸುಪಾರ್ಶ್ವ ಗುಹೆ

ಸಮಾಜ ಮುಖದಲ್ಲೂ ಶ್ರೀ ಕ್ಷೇತ್ರ ಹಲವಾರು ಕಾರ್ಯಗಳನ್ನು ಮಾಡುತ್ತಿದೆ. ದೇವಳದ ವತಿಯಿಂದ ಶಾಲೆ, ವಿದ್ಯಾರ್ಥಿಗಳಿಗೆ ಪ್ರತಿ ದಿನ ಮದ್ಯಾಹ್ನದ ಭೋಜನ ವ್ಯವಸ್ಥೆ, ಸಾಮೂಹಿಕ ವಿವಾಹ, ಸಾಮೂಹಿಕ ಬ್ರಹ್ಮೋಪದೇಶ, ವೈದ್ಯಕೀಯ ಶಿಬಿರ, ತರಬೇತಿ ಶಿಬಿರ, ಆದ್ಯಾತ್ಮಿಕ ಚರ್ಚೆ, ಕಾರ್ಯಾಗಾರಗಳಂತಹ ಅಭಿವೃದ್ದಿ ಕಾರ್ಯಗಳು ಶ್ರೀ ಕ್ಷೇತ್ರದ ವತಿಯಿಂದ ನಿರಂತರವಾಗಿ ನೆಡೆಯುತ್ತಿದ್ದು, ದೇವಳದ ವತಿಯಿಂದ ನೆಡೆಸುತ್ತಿರುವ ಕಲ್ಯಾಣ ಮಂಟಪದಲ್ಲಿ ಅತೀ ಕಡಿಮೆ ಖರ್ಚಿನಲ್ಲಿ ಶುಭ ಸಮಾರಂಭಗಳು ನಿತ್ಯವೂ ನೆಡೆಯುತ್ತಿವೆ.

 

ಗೆಳೆಯರೇ, ದೇವರು ಎಂಬುದು ಖಾಸಗಿ ವಿಷಯ. ಎನೇ ಇರಲಿ, ಕಮಲಶಿಲೆ ಒಂದು ಸಾರಿ ಬೇಟಿ ಕೊಡಲೇಬೇಕಾದ ಪ್ರವಾಸೀ ತಾಣ. ನಿಮ್ಮ ಈ ಬೇಸಿಗೆಯ ಪ್ರವಾಸದಲ್ಲಿ ಸಾದ್ಯವಾದರೆ ಕಮಲಶಿಲೆಯನ್ನು ಸೇರಿಸಿಕೊಳ್ಳಿ ಎಂಬುದು ನಿಮ್ಮ ಈ ಗೆಳೆಯನ ವಯಕ್ತಿಕ ಸಲಹೆ…

Advertisements

Responses

 1. baala ole parichaya kottidyalla maraaya…
  odi bhaari khushi aayt…

 2. Bahala Chennagi Parichaya Madiddiri

 3. Channagi Baredidhiri. (Nice written).

 4. Good Artical. ಕಮಲಶಿಲೆ….Temple is good temple. ಕಮಲಶಿಲೆ…ಯಕ್ಷಗಾನ ಮೇಳ is good ಮೇಳ.

 5. REALLY FANTASTIC INDEED. KEEP IT UP PAVAN.
  YOUR INTRODUCTION OF “KAMALASHILE” HAS BEEN IMPRESSED ME. LET MANY MORE COME OUT FROM YOU.

 6. bhala chanagi bardhidhira ….odhi kannu thampaithu kanri….ya…really good place kamalashile

 7. It was a good place… suranga was very interesting..

 8. kamalashile very good place and suparsha guhe also nice place
  ಕಮಲಶಿಲೆ ತುಂಬಾ ಚೆನ್ನಾಗಿದೆ ಮತ್ತು ಇಲ್ಲಿ ಇರುವ ಶ್ರೀ ಬ್ರಾಹ್ಮೀ ದುರ್ಗಾ ಪರಮೇಶ್ವರಿ ಅಮ್ಮನವರ ದರ್ಶನ ಚೆನ್ನಾಗಿ ಆಯಿತು. ಗುಹೆಯಲ್ಲಿನ ಮಹಾತ್ಮತೆಯನ್ನು ತಿಳಿದುಕೊಂಡೆವು ಇಲ್ಲಿ ಸರ್ಪದೋಷ ನಿವಾರಣ ತೀರ್ಥವನ್ನು ಕುಡಿದೆವು ನೀವು ಸಹ ಬನ್ನಿ ಅಮ್ಮನ ದರ್ಶನ ಮಾಡಿ ನೀವು ದನ್ಯರಾಗಿ


ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

ವಿಭಾಗಗಳು

%d bloggers like this: