Posted by: pavankir | ಮಾರ್ಚ್ 10, 2009

ಯಾರೂ ಅರಿತವರಿಲ್ಲ ಅವನೊಬ್ಬ ಅವಧೂತ..!

  1. ಹಸಿದ ತಿರುಕನು ಹಸಿದೇ ನಿದ್ರಿಸಿದರೆ, ಹೊಟ್ಟೆ ತುಂಬಿದ ಧನಿಕ ನಿದ್ರೆ ಬಾರದೇ ರಾತ್ರಿಯಿಡೀ ಎಚ್ಚರಿದ್ದನಂತೆ.
  2. ಲೌಕಿಕ ಸುಖವನ್ನು ಉಂಡು ತೇಗಿದ ಮೇಲೆ, ವಿರಕ್ತಿ ಹುಟ್ಟಿ ಯೋಗಿ ಎನಿಸಿಕೊಂಡನಂತೆ.
  3. ಮೈ ಮೇಲಿನ ಬಟ್ಟೆಯ ಪರಿವೆ ಇಲ್ಲದೇ ಬೀದಿಯಲ್ಲಿ ತಿರುಗುತ್ತಿದ್ದವನ ಕಂಡು ಜನ ಹುಚ್ಚ, ತಿರುಕನೆಂದರು, ಪಾಪ! ಯಾರೂ ಅರಿತವರಿಲ್ಲ ಅವನೊಬ್ಬ ಅವಧೂತ.
  4. ಕಾಮ ಕ್ರೋಧವ ಬಿಡಿರೆಂದ ಬೈರಾಗಿ, ಮಾಳಿಗೆಯ ಮೇಲೆ ವಲ್ಲೆನೆಂದ ವನಿತೆಯ ಬಲತ್ಕಾರದಲಿ ಬೋಗಿಸಿದನಂತೆ.
  5. ಕಾಯಿಲೆಯ ನಾಯಿಗೆ ಉಣಿಸುತ್ತಿದ್ದ ತಿರುಕನ ಕಂಡು ಹುಚ್ಚನೆಂದರು ಜನ, ಪಾಪ! ಹುಚ್ಚರು.
  6. ದೇಶ ಸೇವೆ, ದೇಶ ಸೇವೆ ಎಂದ ರಾಜಕಾರಣಿ, ಕೊನೆಗೂ ದೇಶವನ್ನು ಸೇವಿಸಿದರು.
  7. ನನ್ನ ಮಡದಿ ಅಪ್ಪಟ ಬಂಗಾರ ಎಂದವ ಯಾರೂ ನೋಡಬಾರದೆಂದು ಭದ್ರವಾಗಿ ಕೋಣೆಯಲ್ಲಿ ಮುಚ್ಚಿಟ್ಟನಂತೆ, ಬಂಗಾರ ತುಕ್ಕು ಹಿಡಿದದ್ದು ಅವ ನೋಡಲೇ ಇಲ್ಲವಂತೆ.
  8. ತನ್ನ ದೂಷಿಸಿದವರನ್ನೂ ತಿರುಗಿ ದೂಷಿಸಿದವನಲ್ಲ, ಅವನೇನು ಕಿವುಡನಲ್ಲ, ಪಾಪ! ಮೂಕ.
  9. ಊರೆಲ್ಲಾ ಪೂಜಿಸುವ ಪುರೋಹಿತನಿಗೆ, ಮನೆಯಲ್ಲಿ ಪೂಜಿಸಲು ದೇವರೇ ಇಲ್ಲವಂತೆ.
  10. ಸರಸ್ವತೀ ವರ ಪುತ್ರನಿಗೆ ಕೊನೆಗೂ ವಿದ್ಯೆಯನ್ನು ಕೊಂಡುಕೊಳ್ಳಲು ಆಗಲೇ ಇಲ್ಲ.
  11. ಸಾಲು ಸಾಲು ಬರೆವೆನೆಂದವ ಕೊನೆಗೂ ಬರೆದ್ದದ್ದು ಒಂದೇ ಸಾಲು.
Advertisements

Responses

  1. ಬರೇ ಸಾಲುಗಳಲ್ಲ ಸಾರ್… ನುಡಿಮುತ್ತುಗಳು!

  2. veda-vakya sir idu.

  3. Salondu savirartha …..Nija
    Artha madikondu alavadisi kondare
    Baligondu Artha


ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

ವಿಭಾಗಗಳು

%d bloggers like this: