Posted by: pavankir | ಮಾರ್ಚ್ 7, 2009

ಹೆಣ್ಣು..

ವಿಶ್ವ ಮಹಿಳಾ ದಿನಾಚರಣೆಯ ನೆಪದಲ್ಲಿ…ವನಿತೆಯ ಬಗೆಗಿನ ಈ ಕವಿತೆ…

ಹೆಣ್ಣು…

ಎಂಬರೆ ಒಂದು ಶಬ್ದವಲ್ಲ

 ಎಂಬರೆ ಒಂದು ಆಕೃತಿಯಲ್ಲ

ಎಂಬರೆ ಒಂದು ಕಲ್ಪನೆಯಲ್ಲ

ಜಗದ ಶಕ್ತಿ ಎಂಬುದು ಸುಳ್ಳಲ್ಲ..

 

ಹೆಣ್ಣು….

ಕಾಣಿಸಿದೆ ಲೋಕದಿ ತಾಯಾಗಿ

ಉಣಿಸಿದೆ ತನ್ನಸುವ ಹಾಲಾಗಿ

ಧಾರೆಯೆರೆದೆ ಸುಖವ ಮೇಲಾಗಿ

ನೀನೆಮ್ಮ ಕಣ್ಣು, ಇರು ತಾಯೆ ಸುಖವಾಗಿ…

 

ಹೆಣ್ಣು….

ಯೆಮಗೆಲ್ಲ ನೀನಾದೆ ಸೋದರಿ

ನಮ್ಮ ಮೇಲ್ ಹರಿಸಿದೆ ವಾತ್ಸಲ್ಯ ವಾರಿ

ತೋರಿದೆ ಬದುಕೊಳು ಹೊಸ ಪರಿ

ನೀನೆಮ್ಮ ದಾರಿ, ನಿನ್ನದಾಗಲಿ ಸುಖದ ಸಿರಿ…

 

ಹೆಣ್ಣು….

ಬಾಳಲ್ಲಿ ಸತಿಯಾಗಿ ನೀ ಬಂದೆ

ನಲಿವಿರಲಿ ನೋವಿರಲಿ ಹೆಗಲ್ಕೊಟ್ಟು ನಿಂದೆ

ಯಶವೇನು, ಕೀರ್ತಿಯೇನು ಸಕಲವನು ತಂದೆ

ನೀನೆಮ್ಮುಸಿರು, ಅಮಿತವಾಗಲಿ ಸುಖ ಇನ್ನು ಮುಂದೆ…

 

ಹೆಣ್ಣು….

ಮಾಯೆ ಎಂದರು ಹಲವರು

ಮೋಹಿನಿ ಎಂದರು ಮತ್ತೊಬ್ಬರು

ಕಾಮಿನಿ ಎಂದರು ಕೆಲವರು

ಎಂತೋ, ಎನೋ, ನೀನಹುದು ಗುಪ್ತ ಗಾಮಿನಿ….

 

ಹೆಣ್ಣು….

ನಿನ್ನಿಂದ ಕೆಟ್ಟವರುಂಟಂತೆ

ಕೆಟ್ಟವರೂ ಬದಲಾದದ್ದುಂಟಂತೆ

ಸರಿ..ನೀ ನಾರಿ ಒಲಿದರೆ, ಹೆಮ್ಮಾರಿ ಮುನಿದರೆ

ಮುನಿಯದಿರಮ್ಮ ನೀನು..ಸಾಕೆಮಗೆ ನೀನೊಲಿದರೆ…..

 

ಹೆಣ್ಣು….

ಜಗದ ಮೂಲ ಪ್ರೇರಕಿ ನೀನು

ಜಗದೊಳು ಶಕ್ತಿ ಸಂಚಾರಕಿ ನೀನು

ಮಿಗೆ ಶುಭಾಶುಭಕಾರಕಿ ನೀನು

ನಗೆ ಮೊಗ ನೆಗಹುತಲಿರಲಿನ್ನು ಎಂದೆಂದೂ..

Advertisements

Responses

  1. tumba chennagi barediddira.. ishta aayitu

  2. dhanyavaadagalu santhosh…nimma protsaha nirantaravagirali…

  3. ಅರ್ಥ ಚಂದ ಇದೆ.. ಆದರೆ ಇನ್ನೂ ಹೆಚ್ಚು ಚೆಂದಾಗಿ present ಮಾಡಬಹುದಿತ್ತೇನೋ ಎನಿಸಿತು..


ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

ವಿಭಾಗಗಳು

%d bloggers like this: