Posted by: pavankir | ಮಾರ್ಚ್ 1, 2009

ಬಳಸಬೇಕೀ ದೇಹವನು ಉತ್ತಮಕೆ..ಸದ್ಗುಣವೇ ಸಂಪದವು..!

domestic_violence1

ಕೆಲವು ಅಂಕಿ ಅಂಶಗಳನ್ನು ಗಮನಿಸೋಣ….

 • ಭಾರತದಲ್ಲಿ ಪ್ರತಿ 30 ನಿಮಿಷಕ್ಕೊಂದು ಮಹಿಳೆ ಅತ್ಯಾಚಾರಕ್ಕೆ ಬಲಿಯಾಗುತ್ತಿದ್ದಾಳೆ
 • 2007ನೇ ಇಸವಿಯಲ್ಲಿ 20737 ಅತ್ಯಾಚಾರ ಪ್ರಕರಣಗಳು ಭಾರತದಲ್ಲಿ ದಾಖಲಾಗಿದೆ
 • ಪ್ರತಿ ದಿನ ಒಂದಕ್ಕೆ 53 ಅತ್ಯಾಚಾರದ ಪ್ರಕರಣಗಳು ದಾಖಲಾಗುತ್ತಿವೆ.
 • ಪ್ರತಿ 69 ಅತ್ಯಾಚಾರ ಪ್ರಕರಣಗಳಲ್ಲಿ ಬೆಳಕಿಗೆ ಬರುವುದು ಕೇವಲ ಒಂದು ಪ್ರಕರಣ ಮಾತ್ರ.
 • 36.8 ಪ್ರತಿಶತ ಅತ್ಯಾಚಾರ ಪ್ರಕರಣಗಳು ಕುಟುಂಬದ ಸದಸ್ಯರು ಮತ್ತು ಹತ್ತಿರದ ಸಂಬಂಧಿಗಳಿಂದಲೇ ನೆಡೆಯುತ್ತಿದೆ.
 • 70 ಪ್ರತಿಶತ ಪ್ರಕರಣಗಳು ಭಯ ಮತ್ತು ನಾಚಿಕೆಯಿಂದಾಗಿ ಮುಚ್ಚಲ್ಪಡುತ್ತಿವೆ.
 • ವಿದೇಶಿ ಪ್ರವಾಸಿ ಮಹಿಳೆಯರು ಅತ್ಯಾಚಾರಕ್ಕೆ ಒಳಗಾಗುತ್ತಿದ್ದಾರೆ
 • 1953 ರಿಂದ ಇಲ್ಲಿಯವರೆಗೆ ಅತ್ಯಾಚಾರ ಪ್ರಕರಣದಲ್ಲಿ 700 ಪ್ರತಿಶತ ಹೆಚ್ಚಳ ಕಂಡಿದೆ.

ಈ ಎಲ್ಲಾ ಅಂಕಿ ಅಂಶಗಳು ನಮ್ಮ ದೇಶದಲ್ಲಿ ನೆಡೆದ ಇತಿಹಾಸವನ್ನು ಬಿಂಬಿಸುವ ಕನ್ನಡಿಯಂತಿದೆ. ಪ್ರಪಂಚಕ್ಕೆ ತನ್ನದ್ದೇ ಆದ ವಿಶೇಷ ಸಸ್ಕೃತಿಯನ್ನು ಕೊಡುಗೆಯಾಗಿ ಕೊಟ್ಟು ಸಾಂಸ್ಕೃತಿಕ ರಾಯಭಾರಿ ಎಂದು ಮೆರೆಯುತ್ತಿರುವ ಭಾರತದ ಒಡಲಿನಿಂದ ತೆಗೆದ ಕೆಲವು ಮಾಹಿತಿಗಳು. ಅಚ್ಚರಿಯಾಗುತ್ತಿದೆ, ಗೆಳೆಯರೆ..! ಯತ್ರ ನಾರ್ಯಸ್ತು ಪೂಜ್ಯಂತೆ ರಮ0ತೇ ತತ್ರ ದೇವತಾಃ | ಯತ್ರೈತಾಸ್ತು ನ ಪೂಜ್ಯ0ತೆ ಸರ್ವಾ ತತ್ರ ಅಫಲಾಃ ಕ್ರಿಯಾಃ || ಎಂದು ಉದ್ಘೋಷಿಸಿದ ನಮ್ಮ ಭೂಮಿ ಇಂದು ಅದೇ ನಾರಿಯ ಶಿಲಗೆಡಿಸುವಲ್ಲಿ ಜಗತ್ತಿನ ಎಲ್ಲಾ ದೇಶಗಳನ್ನು ಹಿಂದಿಕ್ಕಿ ಮೂರನೇ ಸ್ಥಾನದಲ್ಲಿದೆ.

ಕವಿತಾ ವನಿತಾ ಚೈವ ಸ್ವಯಮೇವಾಗತಾ ವರ! ಬಲಾದಾನೀಯ ಮಾನಚೇ ಸರಸಾ ವಿರಸಾ ಭವೇತ್!!

ಕವಿತೆಯಾಗಲಿ, ವನಿತೆಯಾಗಲಿ ಸ್ವಯಂ ಒಲಿದು ಬರಬೇಕೇ ಹೊರತು, ಬಲಾತ್ಕಾರ ಸಲ್ಲದು. ಬಲಾತ್ಕರಿಸಿದಲ್ಲಿ, ಸರಸವು ವಿರಸದಲ್ಲಿ ಪರ್ಯವಸಾನಗೊಳ್ಳುತ್ತದೆ. ಹೆಣ್ಣನ್ನು ಕೇವಲ ಕಾಮದ ಬೊಂಬೆಯಾಗಿ ಯಾ ಭೋಗದ ವಸ್ತುವಾಗಿ ಕಂಡವರು ನಾವಲ್ಲ. ಹೆಣ್ಣನ್ನು, ನಾವು, ನಮ್ಮನ್ನು ಹೊತ್ತ ನೆಲವಾಗಿ, ಕುಡಿಯುವ ಜಲವಾಗಿ, ಚೆಲ್ಲಿದ ಹಸಿರಾಗಿ, ದೇಶವಾಗಿ, ಭಾಷೆಯಾಗಿ ಕಂಡವರು ನಾವು. ನಮ್ಮ ನೆಲದಲ್ಲಿ ಹೆಣ್ಣನ್ನು ಗೌರವ ಪೂರ್ಣವಾಗಿ ಕಂಡವರೇ ಹೊರತು ಕೇವಲವಾಗಿ ಕಂಡದ್ದಿಲ್ಲ. ನಮಗೆ ತಾಯಿಯಾಗಿ, ತಂಗಿಯಾಗಿ, ಗೆಳತಿಯಾಗಿ, ಜೀವನ ಸಂಗಾತಿಯಾಗಿ, ಮಗಳಾಗಿ ಬರುವ ಹೆಣ್ಣು ಪುರುಷನ ಭಾಗ್ಯವನ್ನು ನಿರ್ಧರಿಸುವವಳಾಗಿರುತ್ತಾಳೆ. ಮನುಷ್ಯನ ಹೃದಯ ವಿರುವ ಭಾಗವಾದ ವಾಮ ಭಾಗವನ್ನು ಸತಿಗೆ ನೀಡುವಲ್ಲಿ, ಹೆಣ್ಣು ಪುರುಷನ ಹೃದಯ ಎನ್ನುವ ಸರಳ ಸತ್ಯದ ಅನಾವರಣವಾಗುತ್ತದೆ.

“ಕಾಮ” ಜೀವಚಕ್ರದ ಬುನಾದಿ. ಆದರೆ ಇದು ಮನುಷ್ಯನ ದೌರ್ಬಲ್ಯವೂ ಹೌದು. ಪ್ರೇಮದ ಚೌಕಟ್ಟಿನಲ್ಲಿ ಅರಳಿ ನಿಂತ ಕಾಮ ಪ್ರಪಂಚದಲ್ಲಿ ಗೌರವಿಸಲ್ಪಡುತ್ತದೆ, ಮತ್ತು ಮಾನಿಸಲ್ಪಡುತ್ತದೆ. ಆದರೆ ಪ್ರೇಮದ ಚೌಕಟ್ಟನ್ನು ಮೀರಿ ಕೆರಳಿನಿಂತ ಕಾಮ ಸಮಾಜದಲ್ಲಿ ತಿರಸ್ಕರಿಸಲ್ಪಡುತ್ತದೆ, ಮತ್ತು ಲೋಕ ಕಂಟಕವಾಗಿರುತ್ತದೆ. ಕಾಮಾತುರಾಣಾನಾಮ್ ನ ಭಯಂ ನ ಲಜ್ಜಾ!! ಎತ್ತಾಗಿ ಬೆಳೆದ ಎಳೆಗರು ಹೆತ್ತ ತಾಯಿಯನ್ನೇ ಕಾಮಾತೂರದಿಂದ ಬೇರೆವಂತೆ ಭಯ ಲಜ್ಜೆ ಮರೆತು ವ್ಯವಹರಿಸಿದರೆ, ಮನುಷ್ಯ ಪಶುವಿಗಿಂತ ಭಿನ್ನವಾಗಲಾರ. ಸರಿ ತಪ್ಪುಗಳನ್ನು ವಿವೇಚಿಸುವ ವಿವೇಕವುಳ್ಳ ಮನುಷ್ಯ ಸರ್ವಥಾ ಲಜ್ಜೆಗೇಡಿಯಾಗಕೂಡದು. ಪಾಶ್ಚಿಮಾತ್ಯ ದೇಶಗಳಿಗೆ ಬಾಂಧವ್ಯ, ಸಂಬಂಧಗಳ ಮೌಲ್ಯವನ್ನು ತೋರಿಸಿಕೊಟ್ಟ ದೇಶ ಇಂದು ವಿದೇಶೀಯರ ಬಾಯಲ್ಲಿ “ರೇಪ್ ಕ್ಯಾಪಿಟಲ್” ಎಂದು ಕರೆಸಿಕೊಳ್ಳುತ್ತಿರುವುದು ನಾವೆಲ್ಲರೂ ತಲೆ ತಗ್ಗಿಸುವ ವಿಷಯ.

ಹೆಣ್ಣಿನ ಮಹಿಮೆಯನ್ನು ಸಾರುತ್ತಾ ಹೋದರೆ ಎಷ್ಟೂ ಹೇಳಬಹುದು. ಆದರೆ ಇಲ್ಲಿ ನಾವು ಯೋಚಿಸಬೇಕಾಗಿರುವುದು ಇಂತಹ ಸ್ಥಿತಿಗೆ ನಮ್ಮ ಸಮಾಜ ಇಳಿಯುವುದಕ್ಕಿರುವ ಕಾರಣಗಳ ಬಗ್ಗೆ. ಯುವ ಸಮಾಜ ಒಂದು ನಿರ್ಧಿಷ್ಟವಾದ ಗುರಿಯನ್ನು ಹೊಂದಿರದೇ ವೃತಾ ಪೋಲಾಗುತ್ತಿದೆ. ನಮ್ಮ ಶಿಕ್ಷಣ ವ್ಯವಸ್ಥೆ ಮಕ್ಕಳಿಗೆ ವ್ಯಾವಹಾರಿಕ ಜ್ಞಾನವನ್ನು ಹೇರಳವಾಗಿ ನೀಡುತ್ತಿದೆಯಾದರೂ, ಮೌಲ್ಯಯುತವಾದ ನೈತಿಕ ಜ್ಞಾನವನ್ನು ನೀಡುವಲ್ಲಿ ವಿಫಲವಾಗಿರುವುದು ಕೇಧದ ವಿಷಯ. ಕೇವಲ ಬಾಯ್ದಂಬೂಲದ ಆಸೆಗಾಗಿ ಹೆತ್ತ ತಾಯಿಯ ಸೀರೆಯ ಸೆರಗನ್ನು ವಿಕೃತ ಕಾಮಿಯ ಕೈಗೊಪ್ಪಿಸುವ ಸಂಸ್ಕಾರ ಹೀನ ತಲೆಮಾರು ಸೃಷ್ಟಿಯಾಗದಂತೆ ನೋಡಿಕೊಳ್ಳುವ ಜವಾಬ್ಧಾರಿ ನಮ್ಮ ಮೇಲಿದೆ. ಹೆಣ್ಣನ್ನು ಕಾಮದ ಮೂರ್ತಿಯಂತೆ ಚಿತ್ರಿಸುವ ಮುಕ್ತ ಕಾಮದ ಸಮಾಜ ನಮಗೆ ಬೇಡ. ಮಾತೃವತ್ ಪರದಾರಾಣಿ ಅರ್ಥಾತ್ ಇನ್ನೊಂದು ಹೆಣ್ಣನ್ನು ತಾಯಿಯಂತೆ ಕಾಣುವ ಜವಾಬ್ಧಾರಿಯುತ ಸಮಾಜ ನಿರ್ಮಾಣವಾಗಬೇಕಿದೆ.

ಗೆಳೆಯರೇ, ಈ ಕುರಿತು ಚಿಂತಿಸುವ ಅಗತ್ಯವಿದೆ. NCRB ಯ ದಾಖಲೆಯಲ್ಲಿ, 6 ತಿಂಗಳ ಮಗುವನ್ನು ಅತ್ಯಾಚಾರವೆಸಗಿದ, 76 ವರ್ಷದ ವೃದ್ದೆಯನ್ನು ಬಲಾತ್ಕರಿಸಿ ಕೊಲೆಮಾಡಿದ ಪ್ರಕರಣಗಳಿವೆ. ಇಂತಹ ವಿಕೃತ ಮಾನಸಿಗಳಿಗೆ, ವಿಘ್ನ ತೋಷಿಗಳಿಗೆ, ವಿಕಾರ ಸಂಸ್ಕಾರಿಗಳಿಗೆ ದಿಕ್ಕಾರವಿರಲಿ…ದಿಕ್ಕಾರವಿರಲಿ…ದಿಕ್ಕಾರವಿರಲಿ.

Advertisements

Responses

 1. Lekhana chennagide..

  vikaara somskararigalige nannadu ondu dikkaravirali

 2. Lekhana Good

 3. good article pavan …….


ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

ವಿಭಾಗಗಳು

%d bloggers like this: