Posted by: pavankir | ಫೆಬ್ರವರಿ 22, 2009

ಜೀವನ ವಾರಿ…ಅದಕೆ…ನಾವೇ ರೂವಾರಿ….!

ಒಬ್ಬೊಬ್ಬರ ಬದುಕು ಒಂದೊಂದು ರೀತಿ. ಒಬ್ಬೊಬ್ಬರಿಗೆ ಹುಟ್ಟಿದಂದಿನಿಂದಲೂ ಸುಖವೇ ಆದರೆ ಮತ್ತೆ ಕೆಲವರಿಗೆ ಜೀವನ ಪೂರ್ತಿ ನೋವು ಮಾತ್ರ ಇರುತ್ತದೆ. ನಮ್ಮ ಬದುಕು ಯಾಕೆ ಹೀಗೆ? ಇದಕ್ಕೆ ಬಹು ವಿಧವಾಗಿ ವ್ಯಾಖ್ಯಾನವನ್ನು ಕೊಡಬಹುದು. ಜೀವನದ ಪರಿಯನ್ನು ವಿವರಿಸಲು ಸಾದ್ಯವಿಲ್ಲ. ನಾವು ಜೀವನದಲ್ಲಿ ಬರಬಹುದಾದ ಆದಿ ಬೌತಿಕ, ಆದಿ ಆತ್ಮಿಕ, ಮತ್ತು ಆದಿ ದೈವಿಕ ಎಂಬ ತಾಪತ್ರಯಗಳನ್ನು ಅನುಭವಿಸಿ ಒಮ್ಮೊಮ್ಮೆ ಸೋತು ಸವಕಲಾಗುತ್ತೇವೆ. ಕೆಲವೊಮ್ಮೆ ಇದರಿಂದಲೇ ಗಟ್ಟಿಯಾಗುತ್ತೇವೆ. ಈ ಜೀವನದ ರೂವಾರಿ ಯಾರು? ನಾವೇ ನಮ್ಮ ಜೀವನದ ರೂವಾರಿಗಳು. ಬದುಕನ್ನು ಬಂದ ಹಾಗೆ ಸ್ವೀಕರಿಸುವ ಎದೆಗಾರಿಕೆ ಬೇಕು. ಆಗ ಮಾತ್ರ ನಾವು ಸಂತೋಷದಿಂದ ಜೀವಿಸಲು ಸಾದ್ಯ.

ಮನುಷ್ಯನ ಬದುಕಿಗೆ ಜೀವನ ಎಂದು ಹೆಸರು. ಹರಿಯುವ ನೀರೀಗೂ ಜೀವನ ಎಂದು ಹೆಸರು. ಹರಿಯುವ ನೀರಿಗೆ ಇಕ್ಕೆಲದ ದಡಗಳು ಸರಿ ಇಲ್ಲದೇ ಹೋದರೆ, ನೀರು ಸಿಕ್ಕ ಬಟ್ಟೆಗಳಲ್ಲಿ ಹರಿದು ದಿಕ್ಕಾಪಾಲಾಗುತ್ತದೆ. ಅಂತೆಯೇ ನಮ್ಮ ಬದುಕಿನಲ್ಲೂ ಆಸೆ ಭರವಸೆ ಗಳೆಂಬ ಎರಡು ದಡಗಳು ಸರಿ ಇಲ್ಲದೇ ಹೋದರೆ ಬದುಕು ಮುರಾಬಟ್ಟೆಯಾಗುತ್ತದೆ. ಜೀವನದ ಇಕ್ಕೆಲಗಳಲ್ಲಿ ಮೊದಲನೆಯ ದಡ ಆಸೆ. ಈ ಆಸೆಗೆ ಹಲವು ಮುಖ. ಅದನ್ನು ಕನಸೆನ್ನಬಹುದು, ಇಲ್ಲ ಕಾಮವೆನ್ನಬಹುದು. ನ ಜಾತು ಕಾಮಃ ಕಾಮಾನಾಮ್ ಉಪಭೋಗೇನ ಶಾಮ್ಯತಿ| ಹವೀಷಾ ಕೃಷ್ಣವರ್ತ್ಮೇವ ಭೂಯ ಏವಾಭಿವರ್ಧತೇ|| ಎಂದು ಮಹಾಭಾರತದಲ್ಲಿ ಹೇಳಿರುವುದು ಈ ಕಾರಣದಿಂದಲೇ. ಇದರರ್ಥ, ತುಪ್ಪವನ್ನು ಬೆಂಕಿಗೆ ಸುರಿದಾಗ ಹೇಗೆ ಬೆಂಕಿಯ ಜ್ವಾಲೆ ಮೇಲ್ಮುಕವಾಗಿ ವರ್ಧಿಸುತ್ತದೋ, ಹಾಗೆಯೇ ಕಾಮ ಅರ್ಥಾತ್ ಆಸೆ ಅನುಭವಿಸಿದಂತೆ ಹೆಚ್ಚುತ್ತಾ ಹೋಗುತ್ತದೆ. ಈ ಆಸೆಯೇ ನಮ್ಮ ಜೀವನದ ಹಲವಾರು ದುರಂತಗಳಿಗೆ ಕಾರಣವಾಗುತ್ತದೆ. ಮನುಷ್ಯ ಬೆಳಕಿಲ್ಲದ ದಾರಿಯಲ್ಲಿ ನೆಡೆಯಬಲ್ಲಂತೆ, ಆದರೆ ಕನಸಿಲ್ಲದ ದಾರಿಯಲ್ಲಿ ಒಂದು ಹೆಜ್ಜೆಯನ್ನೂ ನೆಡೆಯಲಾರ. ಒಂದು ಆಸೆಯನ್ನು ಈಡೇರಿಸಿಕೊಳ್ಳುತ್ತಿದ್ದಂತೆಯೇ ಇನ್ನೊಂದು ಆಸೆ ಮೊಳಕೆಯೊಡೆಯುತ್ತದೆ. ಈ ಆಸೆ ಎಂಬ ಮಾಯಾಮೃಗದ ಬೆಂಬತ್ತಿ ಹೊರಡುವ ನಾವು ಕೊನೆಯವರೆಗೂ ಅತೃಪ್ತಿಯನ್ನೇ ಹೊಂದಿರುತ್ತೇವೆ. ಸದೃಡವಾದ ಕನಸು ಯಾ ಆಸೆ ನಮ್ಮ ಜೀವನವನ್ನು ಸುಖವಾಗಿ ಕಳೆಯಲು ಸಹಕಾರಿಯಾಗುತ್ತದೆ. ಈ ಕನಸನ್ನು ಹೆಣೆಯುವಲ್ಲಿ ನಾವು ಬಹಳಷ್ಟು ಜಾಗೃತರಾಗಿರಬೇಕು. ನಾವು ನಮ್ಮ ಆಸೆಯನ್ನು ನಮ್ಮ ಶಕ್ತಿ, ಸಾಮರ್ಥ್ಯ, ಅವಕಾಶ, ಮತ್ತು ಕೊರತೆಗಳೊಂದಿಗೆ ತುಲನೆ ಮಾಡಿ ಸ್ವ ವಿಮರ್ಷೆ ನೆಡೆಸಬೇಕು.

ಇನ್ನು, ಮತ್ತೊಂದು ದಡ ಭರವಸೆ. ಕಟ್ಟಿದ ಕನಸನ್ನು ಈಡೇರಿಸುವಲ್ಲಿನ ಆತ್ಮ ವಿಶ್ವಾಸ. ನಾವು ಸಾಗಿ ಬಂದ ದಾರಿಯನ್ನು ಒಮ್ಮೆ ಸಿಂಹಾವಲೋಕನ ಮಾಡಿದರೆ, ಆ ದಾರಿ ಕವಲಾದ ಸಂದರ್ಭಗಳು ಅನೇಕ. ಕಾಣದ ಸ್ವರವೊಂದು ನಮ್ಮ ಕಿವಿಯ ಮರೆಯಲ್ಲಿ ಅವಿರತ ಕೇಳುವ ಪ್ರಶ್ನೆ “ಆ ಇನ್ನೊಂದು ದಾರಿಯಲ್ಲಿ ಹೋಗಿರುತ್ತಿದ್ದರೆ ನಮ್ಮ ಬದುಕು ಏನಾಗುತ್ತಿತ್ತು?” ಏನೇನೋ ಆಗಬಹುದಿತ್ತು. ಅದನ್ನು ನಾವು ಚಿಂತಿಸ ಕೂಡದು. ನಾನು ಈ ಕೆಲಸದ ಬದಲಾಗಿ, ಮೊದಲು ಸಿಕ್ಕಿದ್ದ ಕೆಲಸಕ್ಕೆ ಸೇರುತ್ತಿದ್ದರೆ ನನ್ನ ಜೀವನ ಚೆನ್ನಾಗಿರುತ್ತಿತ್ತೇನೋ? ಹೀಗೆ ನಾವು ಏನೇನನ್ನೋ ಯೋಚಿಸುತ್ತಿರುತ್ತೇವೆ. ನಮ್ಮ ಇತಿಹಾಸ ನಮ್ಮ ಜೀವನದ ಭವಿಷ್ಯಕ್ಕೆ ಪಠ್ಯವಾಗಬೇಕೇ ಹೊರತು ನಮ್ಮ ಮುಂದಿನ ಹೆಜ್ಜೆಗೆ ಮುಳ್ಳಾಗಬಾರದು.

ಗೆಳೆಯರೇ, ಹೇಳುತ್ತಾ ಹೊರಟರೆ ಸರಾಗ ಸಾಗಬಹುದು. ಒಟ್ಟಿನಲ್ಲಿ ನನ್ನ ಅಭಿಪ್ರಾಯ, ನಮ್ಮ ಜೀವನದಲ್ಲಿ ಎಷ್ಟೇ ಕಷ್ಟ ಬಂದರೂ, ಏನೇ ತೊಂದರೆಯಾದರೂ, ಆಸೆಯನ್ನು ಕೈ ಬಿಡಬಾರದು, ಹಾಗೆಯೇ ಕಟ್ಟಿದ ಆಸೆಯನ್ನು ಈಡೇರಿಸುವಲ್ಲಿ ಭರವಸೆಯ ಜೊತೆ ಮರೆಯಬಾರದು. ಎಲ್ಲಾ ಬೆರಳುಗಳೂ ಒಂದೇ ರೀತಿ ಇರದು, ಹಾಗೆಯೇ ಎಲ್ಲರ ಜೀವನವೂ ಒಂದೇ ರೀತಿ ಇರುವುದಿಲ್ಲ. ಬೆಟ್ಟದ ಮೇಲೆ ಇರುವ ಮರದಲ್ಲಿ ಕಿರುಬೆರಳ ಗಾತ್ರದ ನೆಲ್ಲಿ ಕಾಯಿಯನ್ನು, ನೆಲದ ಮೇಲಿನ ಬಳ್ಳಿಯಲ್ಲಿ ಗಜ ಗಾತ್ರದ ಕುಂಬಳಕಾಯಿಯನ್ನು ಕಂಡರೆ ಅರ್ಥವಾಗುತ್ತದೆ, ಎಲ್ಲವೂ ಅವರವರ ಪ್ರಾಪ್ತಿ ಎಂದು. ಜೀವನದಲ್ಲಿ ಆಶಾವಾದಿಗಳಾಗೋಣ. ಕೆಲವೊಮ್ಮೆ ನಾವು ನಿರೀಕ್ಷಿಸಿದ್ದಕ್ಕಿಂತಲೂ ಭಿನ್ನವಾಗಿ ಬದುಕು ಸಾಗುತ್ತದೆ. ಉದಾಹರಿಸಲು, ರಾತ್ರಿಃ ಗಮಿಷ್ಯತಿ, ಭವಿಷ್ಯತಿ ಸುಪ್ರಭಾತಮ್| ಭಾಸಾನುದೇಷ್ಯತಿ ಹಸಿಷ್ಯತಿ ಪಂಕಜಶ್ರೀಃ|| ಇತ್ಥಮ್ ವಿಚಿಂತಯತಿ ಕೋಶಗತೇ ದ್ವಿರಘೇ | ಹಾ ಹನ್ತಃ ಹಂತಃ ನಲಿನೀಮ್ ಗಜ ಉಜ್ಜಹಾರ|| ಅರ್ಥಾತ್ “ರಾತ್ರಿ ಕಳೆಯಲಿದೆ, ಸುಂದರ ಸುಪ್ರಭಾತ ಬರಲಿದೇ ಸೂರ್ಯ ಉದಯಿಸಲಿದ್ದಾನೆ, ಕಮಲ ಅರಳಲಿದೆ” ಎಂದು ಕಮಲದ ಮೊಗ್ಗಿನ್ನಲ್ಲಿ ಸಿಕ್ಕಿಬಿದ್ದ ಒಂದು ದುಂಭಿ ಯೋಚಿಸುತ್ತಿದ್ದರೆ, ಪಾಪ! ಅಲ್ಲಿಗೆಬಂದ ಆನೆ ಆ ಕಮಲವನ್ನು ಕಾಲಿನಲ್ಲಿ ಹಿಸುಕಿ ಪುಡಿ ಮಾಡಿತು. ಇಂತಹ ಸಂದಿಗ್ದತೆಯಲ್ಲೂ ಭರವಸೆಯಿಟ್ಟು ಜೀವಿಸೋಣ. ಯಾಕೆಂದರೆ ನಮ್ಮ ಜೀವನದ ರೂವಾರಿಗಳು ನಾವೇ…!

ಗೆಳೆಯರೇ, ನಮ್ಮ ಜೀವನ ವಾರಿ ದಡ ತಪ್ಪದಂತೆ ಮುನ್ನೆಡೆಸುವವರು ನಾವುಗಳೇ. ಎಚ್ಛ್ರಕೆಯಿಂದ ಗಮಿಸೋಣ…ಗುರಿ ಸೇರೋಣ….ಎಂಬ ಆಶಯದೊಂದಿಗೆ…ಪ್ರೀತಿಯಿರಲಿ…

Advertisements

Responses

  1. Wonderful, tumba sogasaagide

  2. its nice jeevanada ethihasavannomme jnapisuva swara ringanadanthittu thanks for nice article

  3. Good. jevanake dari deepa.

  4. chennagide… 🙂

  5. ya really wonderfull. jeevana dalli aase ye mukya. aase ellavadare jeevana nashvara.aase ye ellavadare jeevana vemba doni munde saagadu. ennobbarannu nambi kondu jeevana nadesade.. namma daari naave nodabeku… this line i understude resenty…. i like ur articles pavan…


ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

ವಿಭಾಗಗಳು

%d bloggers like this: