Posted by: pavankir | ಫೆಬ್ರವರಿ 18, 2009

ಪ್ರೀತಿ ಎಂದರೆ ಇಷ್ಟೇನಾ?

ನಿನ್ನೆ ಮೊನ್ನೆ ಯಷ್ಟೇ ಕಳೆದ ಪ್ರೇಮಿಗಳ ದಿನಾಚರಣೆಯ ನೆನಪು ಹಸಿಯಾಗಿರುವಾಗಲೆ ಇದನ್ನು ಬರೆಯೋಣ ಎನಿಸಿತು. “ಪ್ರೀತಿ” ಈ ಶಬ್ದವನ್ನು ವ್ಯಾಕ್ಯಾನಿಸುವುದು ಬಹಳ ಕಷ್ಟ. ಈ ಶಬ್ದ ಒಬ್ಬೊಬ್ಬರಿಗೆ ಒಂದೊಂದು ಅರ್ಥವನ್ನು ಕೊಡುತ್ತದೆ. ಈ ಶಬ್ದಕ್ಕಿರುವಷ್ಟು ಶಕ್ತಿ ಪ್ರಾಯಶಃ ಇನ್ನಾವುದಕ್ಕೂ ಇಲ್ಲ. ಇಂತಹ ಪ್ರೀತಿಯನ್ನು ಆರಾದಿಸುವ ಪ್ರೇಮಿಗಳನ್ನು ಬೆಂಬಲಿಸುವ, ವಿರೋಧಿಸುವ ಕಾರ್ಯಗಳು ನೆಡೆದು ಅಂತೂ ಈ ವರ್ಷದ ಪ್ರೇಮಿಗಳ ದಿನ ಇತಿಹಾಸದ ಪುಟ ಸೇರಿತು. ಈ ವ್ಯಾಲೆನ್ಟೈನ್ ದಿನವನ್ನು ಬೆಮ್ಬಲಿಸಬೇಕೋ ಅಥವಾ ವಿರೋಧಿಸಬೇಕೋ ಎಂಬ ವಿಷಯವನ್ನು ಒತ್ತಟ್ಟಿಗಿಟ್ಟು ನನ್ನ ಈ ವಿಚಾರಧಾರೆಯನ್ನು ಪರಾಮರ್ಶಿಸಿ…..!

ಇಡೀ ಜಗತ್ತೇ ಪ್ರೇಮಮಯ. ಸಂಪೂರ್ಣ ಜಗತ್ತನ್ನು ನಿಯಂತ್ರಿಸುವ ಶಕ್ತಿ ಪ್ರೀತಿ ಮಾತ್ರವಲ್ಲ ಜಗತ್ತಿನ ಆದಾರ ಪ್ರೀತಿ. ಇದನ್ನು ವಿವರಿಸುವುದು ಕಷ್ಟ. ಎಲ್ಲೋ ಹದಿಹರೆಯದ ಕಾಮನೆಗಳಿಗೆ ಬಣ್ಣ ತುಂಬುವ ಯವುದೋ ಒಂದು ಆಕರ್ಷಣೆಯೇ ಪ್ರೀತಿಯಲ್ಲ. ಬೌತಿಕವಾದ ವಾಂಚೆಯನ್ನು ಪ್ರೀತಿ ಎನ್ನಲಾಗದು, ಬೌಧ್ಧಿಕವಾದ ಇಚ್ಛೆಯನ್ನು ಮಾತ್ರವೇ ಪ್ರೀತಿ ಎಂದು ಗುರುತಿಸಬಹುದು. ಪ್ರೀತಿಗೆ ಇರುವ ಮುಖಗಳು ನೂರಾರು. ಕೇವಲ ಪರಸ್ಪರ ಅಭಿಮುಖ ಲಿಂಗಗಳ ನಡುವೆ ಮೂಡುವ ಆಕರ್ಷಣೆಯನ್ನು ಪ್ರೀತಿ ಎಂದು ಕರೆಯಲಾಗದು. ಆದುದರಿಂದ ಪ್ರೇಮಿಗಳ ದಿನವನ್ನು ಕೇವಲ ಹದಿಹರೆಯದವರ ದಿನವೆಂದು ಪರಿಗಣಿಸದೆ ಒಂದು ಹೊಸ ದೃಷ್ಟಿಕೋನದಿಂದ ನೋಡುವ, ಆಚರಿಸುವ ಅಗತ್ಯವಿದೆ. ಇದು ನನ್ನ ಅಭಿಮತ…ಇದಕ್ಕೆ ಸಿಗಬಹುದೇ ನಿಮ್ಮ ಸಹಮತ?

ಪ್ರೀತಿಯೇ ಹೂವೇ? ಅಥವಾ ಹೂವೇ ಪ್ರೀತಿಯೇ?

ಪ್ರೀತಿಗೆ ನಾನಾ ಮುಖಗಳು. ನಾವು ನಮಗಿಂತ ಹಿರಿಯತನ್ನು ಪ್ರೀತಿಸುತ್ತೇವೆ, ಅದಕ್ಕೆ ಗೌರವ ಎಂದು ಹೆಸರು. ನಾವು ನಮಗಿಂತ ಕಿರಿಯರನ್ನು ಪ್ರೀತಿಸುತ್ತೇವೆ, ಅದಕ್ಕೆ ವಾತ್ಸಲ್ಯವೆನ್ದು ಹೆಸರು. ನಾವು ನಮ್ಮ ಸಮಾನರನ್ನು ಪ್ರೀತಿಸುತ್ತೇವೆ, ಅದಕ್ಕೆ ಮೈತ್ರಿ ಎಂದು ಹೆಸರು. ನಾವು ದೇವರನ್ನು ಪ್ರೀತಿಸುತ್ತೇವೆ, ಅದಕ್ಕೆ ಭಕ್ತಿ ಎಂದು ಹೆಸರು. ನಾವು ನಮ್ಮ ಶತ್ರುವನ್ನೂ ಪ್ರೀತಿಸುತ್ತೇವೆ, ಅದಕ್ಕೆ ದ್ವೇಷ ಎಂದು ಹೆಸರು, ನಾವು ನಮಗಿಂತ ದುರ್ಬಲರನ್ನು ಪ್ರೀತಿಸುತ್ತೇವೆ, ಅದಕ್ಕೆ ಕರುಣೆ ಎಂದು ಹೆಸರು. ನಾವು ನಮಗಿಂತ ಬಲಿಷ್ಟರನ್ನು ಪ್ರೀತಿಸುತ್ತೇವೆ, ಅದಕ್ಕೆ ಭೀತಿ ಎಂದು ಹೆಸರು. ನಾವು ಪ್ರಾಣಿ, ಪಕ್ಷಿಗಳನ್ನು ಪ್ರೀತಿಸುತ್ತೇವೆ, ಅದಕ್ಕೆ ಮಮತೆ ಎಂದು ಹೆಸರು. ನಾವು ನಮ್ಮ ಪರಿಸರವನ್ನು ಪ್ರೀತಿಸುತ್ತೇವೆ, ಅದಕ್ಕೆ ಸೆಳೆತ ಎಂದು ಹೆಸರು. ನಾವು ನಮ್ಮ ವಸ್ತುಗಳನ್ನು ಪ್ರೀತಿಸುತ್ತೇವೆ, ಅದಕ್ಕೆ ವ್ಯಾಮೋಹವೆಂದು ಹೆಸರು. ಹೀಗೆ ಪ್ರೀತಿಗೆ ವಿಬಿನ್ನ ಮುಖಗಳು. ನಾವು ಈ ಎಲ್ಲಾ ಭಾವಗಳನ್ನು ಅನುಭವಿಸಿರುತ್ತೇವೆ, ಆದರೆ ಪ್ರೀತಿಯನ್ನು ವ್ಯಾಕ್ಯಾನಿಸುವಾಗ ಮಾತ್ರ ಸಂಕುಚಿತರಾಗುತ್ತೇವೆ.

ನಮ್ಮ ಬಾಳ ಜ್ಯೋತಿಯೇ ಪ್ರೀತಿ. ಈ ಪ್ರೀತಿಯನ್ನು ನಾವು ಇನ್ನೊಬ್ಬರಿಗೆ ಧಾರೆ ಎರೆಯುವಲ್ಲಿ ಸಿಗುವ ಆನಂದ ಪ್ರಾಯಶಃ ಇನ್ನೊಂದರಲ್ಲಿ ದೊರೆಯದು. ಇನ್ನೊಬ್ಬರನ್ನು ದ್ವೇಶಿಸುವುದಕ್ಕೆ ನೂರಾರು ಕಾರಣಗಳು ಬೇಕಾಗುತ್ತವೆ, ಆದರೆ ವ್ಯಕ್ತಿಯೊಬ್ಬನನ್ನು ಪ್ರೀತಿಸಲು ಯಾವುದೇ ಕಾರಣಗಳು ಬೇಡವಾಗುತ್ತದೆ. ಎರಡು ಹೃದಯಗಳ ನಡುವೆ ಮೂಡುವ ಪ್ರೀತಿಯನ್ನು ಅನುರಾಗ ಎಂದು ಹೆಸರಿಸಬಹುದು. ಒಂದು ಚಚ್ಚೌಕಾಕಾರದ ಕೋಣೆಯೊಳಗೆ ಅಭಿಮುಖವಾಗಿ ಎರಡು ವೀಣೆಗಳನ್ನು ಇರಿಸಿದಾಗ ಒಂದು ವೀಣೆಯನ್ನು ಮೀಟಿದರೆ ಇನ್ನೊಂದು ವೀಣೆಯಿಂದ ಸ್ವರ ಹೊರ ಹೊಮ್ಮುತ್ತದೆ. ಅದನ್ನೇ ನಾವು ಅನುರಾಗವೆನ್ನುವುದು. ಪ್ರೀತಿ ಯಾವಾಗಲೂ ನಿಸ್ವಾರ್ಥಪೂರ್ಣವಾಗಿರಬೇಕು. ಅನ್‌ಕಂಡೀಶನಲ್ ಲವ್ ಎನ್ನುವುದು ಇದನ್ನೇ. ಮನೆಯ ಯಜಮಾನನನ್ನು ಕಂಡು ಬಾಲ ಕುಣಿಸುವ ಮನೆಯ ನಾಯಿ ತೋರುವ ಪ್ರೀತಿ ನಿಸ್ವಾರ್ಥವಾದದ್ದು. ಪ್ರತಿಯಾಗಿ ಏನನ್ನಾದರೂ ಅಪೇಕ್ಷಿಸಿ ನೀದುವ ಪ್ರೀತಿ ಎಂದಿಗೂ ಶ್ರೇಷ್ಟವೆನಿಸದು.

ಗೆಳೆಯರೇ, ನಾವು ಈ ಪ್ರೇಮಿಗಳ ದಿನದ ನೆವದಲ್ಲಿ ಒಂದು ಅರ್ಥ ಪೂರ್ಣ ದಿನವನ್ನು ಆಚರಿಸೋಣ. ಇದಕ್ಕೆ ಫೆಬ್ರವರಿ 14ರ ದಿನವೇ ಆಗಬೇಕೆಂದೇನಿಲ್ಲ. ಅನುದಿನವೂ ಪ್ರೇಮ ಪರ್ವವೇ. ಪ್ರೇಮಮಯವಾದ ಈ ಜಗತ್ತನ್ನು ಪ್ರೇಮ ದೃಷ್ಟಿಯಿಂದ ನೋಡುವ ಪ್ರಯತ್ನ ಮಾಡೋಣ. ನಾವು ಪ್ರೀತಿಸುವವರಿಗೆ ನಮ್ಮ ಪ್ರೀತಿಯನ್ನು ನಿವೇದಿಸೋಣ. “ಅಪ್ಪ-ಅಮ್ಮ ನೀವೆಂದರೆ ನನಗೆ ತುಂಬಾ ಇಷ್ಟ” ಎನ್ನುವ ಒನ್ದೇ ಒಂದು ನುಡಿ ಬದುಕನ್ನು ಕಂಡು ಬೆಂದಿರುವ ಮೂಡಿ ಜೀವಗಳಿಗೆ ಹೊಸ ಜೀವನೋತ್ಸಾಹವನ್ನು ನೀಡುತ್ತದೆ. ದಾರಿಯಲ್ಲಿ ಹಸಿದು ಮಲಗಿರುವ ನಾಯಿಯ ಮೇಲೆ ನಾವು ತೋರುವ ಕರುಣೆ, ಅದರ ಬದುಕಿನ ದಿಕ್ಕನ್ನೇ ಬದಲಿಸುತ್ತದೆ. ಈ ನಿಟ್ಟಿನಲ್ಲಿ ಇಡೀ ಜಗತ್ತನ್ನೇ ನಗು ಮೊಗದಿಂದ, ಪ್ರೀತಿಯಿಂದ ಎದುರಿಸುವ, ಸ್ವೀಕರಿಸುವ ಒಂದು ಆಂದೋಲನಕ್ಕೆ ನಾಂದಿ ಹಾಡೋಣ. ಈ ಆಂದೋಳನ ನಮ್ಮ ಮನೆಯಿಂದ ಆರಂಭವಾಗಿ, ನಾವು ನೆಡೆಯುವ ದಾರಿಯಲ್ಲೇ ಸಾಗಿ, ನಮ್ಮ ಕಛೇರಿಯಲ್ಲೇ ದಿನ ಕಳೆದು ನಮ್ಮೊಂದಿಗೆ ಹಿಂತಿರುಗಬೇಕು. ಭೂಮಿಗೆ ಬಿದ್ದ ಮಳೆಯ ಒಂದೇ ಒಂದು ಬಿಂದು, ಹರಿದು ತೊರೆಯಾಗಿ, ಹೊಳೆಯಾಗಿ, ನದಿಯಾಗಿ, ಮಹಾ ಸಾಗರ ಸಿಂಧುವಾಗುವಂತೆ, ನಮ್ಮ ಈ ಪ್ರೀತಿಯ ಬಿಂಧು ನಮ್ಮ ಸುತ್ತಮುತ್ತಲಿನವರೆಲ್ಲರ ಮೇಲೂ ಪ್ರವಹಿಸಿ ಪ್ರೀತಿಯ ಮಹಾ ಸಿಂಧುವಾಗಿ ಹರಿದು ಇಡೀ ಜಗತ್ತೇ ಪ್ರೇಮಮಯವಾಗಲಿ ಎಂದು ಆಶಿಸುತ್ತಾ,….ಈ ನಾಲ್ಕು ನುಡಿಗಳು….ಜೀವನ ಪ್ರೀತಿ ಎಂದೂ ಬತ್ತದಿರಲಿ…..!

Advertisements

Responses

 1. ನಿಜ. ಮತ್ತೊಂದು ವಿಚಾರವೆಂದರೆ ಪ್ರೀತಿ ಎಂದರೆ ಹುಡುಗ-ಹುಡುಗಿ ಮಧ್ಯೆ ನಡೆವುದು ಮಾತ್ರ ಅಲ್ಲ;
  ಅಪ್ಪ-ಅಮ್ಮನನ್ನು ಇಷ್ಟಪಡುವುದಕ್ಕೂ ಪ್ರೀತಿ ಅನ್ನುತ್ತಾರೆ ಎಂಬುದನ್ನು ವ್ಯಾಲೆಂಟೈನ್ ಡೇ ಆಚರಿಸುವವರು ಗಮನಿಸಬೇಕಾದ್ದು.

  ಲೇಖನ ಚೆನ್ನಾಗಿದೆ. ಅಲ್ಲಿ-ಇಲ್ಲಿ ಸ್ವಲ್ಪ ತಪ್ಪುಗಳನ್ನು( ಉದಾಹರಣೆ: ವ್ಯಾಕ್ಯಾನ ಅಲ್ಲ, ವ್ಯಾಖ್ಯಾನ.) ಸರಿಪಡಿಸಿಕೊಂಡರೆ ಓದುವಾಗ ಅಡ್ಡಿಯಾಗದು.

 2. ತುಂಬ ಚೆನ್ನಾಗಿ ಬರೆದಿದ್ದೀರ

  ಇಷ್ಟ ಆಯಿತು..

  ಈ ಪ್ರೀತಿ ಪ್ರೇಮಕ್ಕೆ ಏನೇ Definition ಕೊಟ್ರು ಯಾವುದು ಸರಿಯಾಗಿ ಅರ್ಥ ಆಗೋಲ್ಲ

  ಅದು ಎಷ್ಟೇ ಮೂಲಭೂತ ಇಚ್ಚಾ ಕ್ರಿಯೇಯಾಗಿರಬೇಕೆಂದು ಪ್ರಯತ್ನಿಸದರೂ ಸ್ವಾರ್ಥ ಅಡಗಿ ಬಂದು ಕೂತಿರುತ್ತೆ.

  ಎಲ್ಲವು ನಮ್ಮ ನಮ್ಮ ಅಭಿವ್ಯಕ್ತಿಯ ಹಿಡಿತಕ್ಕೆ ಎಷ್ಟು ಸಿಗುತ್ತೋ ಅಷ್ಟೆ .

  ಧನ್ಯವಾದಗಳು .

 3. ಧನ್ಯವಾದಗಳು ರಂಜಿತ್, ಸಂತೋಷ್.

  ಇನ್ನೂ ಮುಂದಿನ ಬರವಣಿಗೆಗಳಲ್ಲಿ ತಪ್ಪಿಲ್ಲದಂತೆ ಬರೆಯಲು ಪ್ರಯತ್ನಿಸುತ್ತೇನೆ. ನಿಮ್ಮ ಪ್ರೋತ್ಸಾಹ ನಿರಂತರವಾಗಿರಲಿ.

 4. Super aagi barididdira sir…….

 5. ನಿಮ್ಮ ಮಾತು ಸರಿ, ಪವನರೇ… ಸಮರ್ಥನೆಯಿದೆ…

 6. tumba chennagi barediddiri nanage tumba ishta ahitu nivu helidante pritige halavaru mukagalive adu noduv drushti mele avalambaneyagirutte.

 7. tumba chennagi bandide sir ide taraha bareyari


ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

ವಿಭಾಗಗಳು

%d bloggers like this: