Posted by: pavankir | ಫೆಬ್ರವರಿ 12, 2009

ಜಗತ್ತನ್ನೇ ಬದಲಾಯಿಸುವ ಶಕ್ತಿ ಯಾರಲ್ಲಿದೆ?

ಸದಾ ಕಾಲ ನಾವು ನೀವು ಗೊಣಗುತ್ತಿರುತ್ತೆವೆ. ಈ ಪ್ರಪಂಚ ಸರಿ ಇಲ್ಲ, ಕಾಲ ಕೆಟ್ಟು ಹೋಗಿದೆ, ಮನುಷ್ಯರು ಬದಲಾಗಿದ್ದಾರೆ…ಇತ್ಯಾದಿ. ಈ ಪ್ರಪಂಚ ಈ ರೀತಿ ಆಗುವುದಕ್ಕೆ ಕಾರಣವೇನು? ಎಲ್ಲೆಂದರಲ್ಲಿ ಕೊಲೆ, ಸುಲಿಗೆ, ದರೋಡೆ, ಇತ್ಯಾದಿ ಇತ್ಯಾದಿ. ಈ ಜಗತ್ತನ್ನು ಮುನ್ನೆಡೆಸಲು ಬೇಕಾದ ಒಂದು ಶಕ್ತಿ, ಈ ಜಗತ್ತನ್ನೇ ಬದಲಿಸುವ ಬಲ ಯಾರಲ್ಲಿದೆ? ಅಂತಹ ಅದ್ಭುತ ಶಕ್ತಿ ಯಾರಲ್ಲಿದೆ ಎಂಬುದನ್ನು ತೋರಿಸುವ ಕಣ್ತೆರೆಸುವ ಕಥಾನಕ ಇಲ್ಲಿದೆ.

ಎಲ್ಲಾ ಕತೆ ಆರಂಭವಾಗುವಂತೆ,ಇಲ್ಲಿಯೂ ಒಂದು ಉರಿನಲ್ಲಿ ಒಬ್ಬಳು ಆಲಸಿ ಮುದುಕಿ ಇದ್ದಳು. ಅವಳು ಎಷ್ತು ಆಲಸಿ ಎಂದರೆ ಅವಳ ಮೈ ಬಟ್ಟೆಗಳು ನೀರನ್ನು ಕಂಡು ವರ್ಷ ಕಳೆದಿದ್ದವು. ಅವಳು ಅವಳ ಮನೆಯನ್ನು ಕಟ್ಟಿಸಿದ ಮೇಲೆ ಅವಳ ಮನೆಯನ್ನು ತೊಳೆದು ಸ್ವಚ್ಛ ಮಾಡಿರಲಿಲ್ಲ. ಅವಳ ಮನೆಯ ಅಕ್ಕ ಪಕ್ಕದಲ್ಲಿ ವಾಸಿಸುವವರೆಲ್ಲರು ಇವಳಂತೆಯೇ ಇದ್ದರು. ದಿನವಿಡೀ ಅವಳ ಕೆಲಸವೆಂದರೆ ಇನ್ನೊಬ್ಬರನ್ನು ಟೀಕಿಸುವುದು. ಅವಳ ಸಂಬಂಧಿಕರಾಗಲಿ, ಗೆಳೆಯರಾಗಲಿ, ಯಾರೊಬ್ಬರೂ ಅವಳ ಮನೆಯ ಹತ್ತಿರ ಸುಳಿಯುತ್ತಿರಲಿಲ್ಲ.

ಒಂದು ದಿನ ಆ ಮುದುಕಿ ವಾಸವಾಗಿದ್ದ ಬೀದಿಯಲ್ಲಿ, ನೆಡೆದು ಹೋಗುತ್ತಿದ್ದ ಒಬ್ಬ ಸಾಧು ಆ ಮುದುಕಿಗೆ ಬಂಗಾರದಿಂದ ಮಾಡಿದ ಒಂದು ಮೂರ್ತಿಯನ್ನು ಕೊಟ್ಟನು. ಸಂತೋಷದಿಂದ ಸ್ವೀಕರಿಸಿದ ಮುದುಕಿ ಅದನ್ನು ತನ್ನ ಮನೆಯ ಒಂದು ಮೂಲೆಯಲ್ಲಿಟ್ಟಳು. ಸುಂದರವಾದ, ಕಾಂತಿಯುಳ್ಳ ಮೂರ್ತಿ, ಮನೆಯಲ್ಲಿದ್ದ ಕೊಳಕಿನಿಂದಾಗಿ ಕಳಾಹೀನವಾಗಿ ಕಾಣಿಸತೊಡಗಿತು.

ಬಂಗಾರದ ಮೂರ್ತಿ

ಸ್ವಲ್ಪ ಹೊತ್ತು ಚಿಂತಿಸಿದ ಮುದುಕಿ ಮೂರ್ತಿಯನ್ನು  ಇರಿಸಿದ ಪೀಠವನ್ನು ತೊಳೆದು ಸ್ವಚ್ಛ ಮಾಡಿದಳು.ಕೊಳಕು ತುಂಬಿದ್ದ ಮನೆಯ ಮೂಲೆಯಲ್ಲಿ ಆ ಪೀಠವನ್ನು ಇರಿಸಿದ್ದು ಇನ್ನಷ್ತು  ಆಭಾಸವಾಗಿ ಕಾಣಿಸಿತು. ಕೂಡಲೇ ಮುದುಕಿ ಮನೆಯ ಮೂಲೆಯಲ್ಲಿದ್ದ ಕೊಳಕನ್ನೆಲ್ಲಾ ಗುಡಿಸಿ ಸಾರಿಸಿ ಸ್ವಚ್ಛ ಗೊಳಿಸಿದಳು. ಆಗ, ದೊಡ್ಡದ್ದಾದ ಮನೆಯಲ್ಲಿ ಕೇವಲ ಮೂಲೆ ಮಾತ್ರ ಶುದ್ದವಾದುದರಿಂದ, ಉಳಿದ ಭಾಗ ಅಸಹ್ಯವಾಗಿ ತೋರಿತು. ಕೂಡಲೆ ಆ ಕೋಣೆಯನ್ನೇ ಸ್ವಚ್ಛ ಮಾಡಿದಳು. ಹೀಗೆ ಇಡೀ ಮನೆಯನ್ನೇ ಸ್ವಚ್ಛ ಮಾಡಿದಳು. ಮನೆಯನ್ನು ಸ್ವಚ್ಛ ಮಾಡಿದ ಮುದುಕಿ ಕನ್ನಡಿಯಲ್ಲಿ ತನ್ನನ್ನು ತಾನು ಕಂಡಾಗ ಇಂತಾ ಸುಂದರವಾದ ಮನೆಯಲ್ಲಿ ತನ್ನಂತಹ ಕೊಳಕು ಮನುಷ್ಯರು ಇರಲು ಯೋಗ್ಯರಲ್ಲ ಎಂದು ಭಾವಿಸಿ ಲಘು ಬಗೆಯಿಂದ ಸ್ನಾನ ಮಾಡಿ, ಶುದ್ದ ಬಟ್ಟೆ ಧರಿಸಿದಳು. ಚೆಲುವಿನಿಂದ ಸಿಂಗರಿಸಿಕೊಂಡು ಹೊರ ಬಂದ ಮುದುಕಿಗೆ, ತನ್ನ ವಠಾರವೇ ಕೊಳಕಾಗಿ ತೋರಿತು ಮುದುಕಿಯ ಮನೆಯ ಅಕ್ಕ ಪಕ್ಕದಲ್ಲಿರುವ ಎಲ್ಲರಿಗೂ ಮುದುಕಿಯ ಅಂದವಾದ ಮನೆಯ ಪಕ್ಕದಲ್ಲಿ ಇರುವ ತಮ್ಮ ಮನೆ, ತಮ್ಮ ಮಕ್ಕಳು ಎಲ್ಲರೂ ಕೊಳಕೆಂದು ತೋರಿತು. ತಕ್ಷಣ ಎಲ್ಲರೂ ತಮ್ಮ ತಮ್ಮ ಮನೆಯನ್ನು, ಮನೆ ಮಂದಿಯನ್ನು ಸ್ವಚ್ಚಗೊಳಿಸಿದರು. ಹೀಗೆ ನೋಡ ನೋಡುತ್ತಿದ್ದಂತೆಯೇ ಸಂಪೂರ್ಣ ಕೇರಿಯೆ ಶುದ್ದವಾಗಿ ರಾರಾಜಿಸತೊಡಗಿತು.

ಈಗ ಹೇಳಿ ಗೆಳೆಯರೆ, ಜಗತ್ತನ್ನು ಬದಲಿಸುವ ಶಕ್ತಿ ಎಲ್ಲಿದೆ. ಅದು ಎಲ್ಲೆಲ್ಲೋ ಇಲ್ಲ ಅದು ನಮ್ಮೊಳಗಿದೆ. ಬಲ್ಲವರು ಒಂದು ಮಾತು ಹೇಳಿದ್ದಾರೆ, ಬಾಳ ದಿಕ್ಪಥಕೆ ಒಡೆಯ ಜೀವರನೆ ಬಾಳ ರೂಪಿಸುವನಯ್ಯ ಎಂದು. ಅಂದರೆ ನಮ್ಮ ಬಾಳನ್ನು ರೂಪಿಸುವ ರೂವಾರಿಗಳು ಯಾರೋ ಅಲ್ಲ, ಅದು ನಾವೇ ಎಂದು. ಮುದುಕಿಯಂತೆ, ನಾವು ಕೂಡಾ ಇನ್ನೊಬ್ಬರನ್ನು ಟೀಕಿಸುವಲ್ಲಿ ಮಗ್ನರಾಗಿರುತ್ತೇವೆ. ನಮ್ಮನ್ನು ನಾವು ಸರಿಪಡಿಸಿಕೊಂಡರೆ ಜಗತ್ತು ತನ್ನಷ್ಟಕ್ಕೆ ತಾನೇ ಬದಲಾಗುತ್ತದೆ ಎಂಬ ಸರಳ ಸತ್ಯ ನಮಗಿನ್ನೂ ಅರ್ಥವಾಗಿಲ್ಲ. ನಮ್ಮ ಮನೆಯ ಮಂದಿಗೆ ಸತ್ಯವನ್ನು ಹೇಳುವ ಅಗತ್ಯವನ್ನು ಬೋದಿಸುವ ನಾವು, ದಿನವೂ ಸುಳ್ಳನ್ನು ಲೀಲಾ ಜಾಲವಾಗಿ ಹೇಳುತ್ತೇವೆ. ಮಕ್ಕಳಿಗೆ ಕಳ್ಳತನ ಮಾಡಬಾರದೆನ್ದು ಬೋದಿಸುವ ನಾವು ದಿನವೂ ಕಛೇರಿಯಿಂದ ಪೆನ್, ಪೇಪರ್, ಇತ್ಯಾದಿಯನ್ನು ಕದ್ದು ತರುತ್ತೇವೆ. ಅಂಗಡಿಯವನು ನಮಗೆ ಮೋಸ ಮಾಡಬಾರದೆಂದು ಬಯಸುವ ನಾವು, ನಮ್ಮಲ್ಲಿರುವ ಹರಿದ ನೋಟನ್ನು ಎರಡು ಒಳ್ಳೆಯ ನೋಟಿನ ನಡುವೆ ಇತ್ತು ವಿನಯದಿಂದ ಸಾಗ ಹಾಕುತ್ತೆವೆ. ನಾವು ಯಾವುದೋ ವಿಳಾಸ ಹುಡುಕುವಾಗ ಎಲ್ಲರೂ ಸತ್ಯವನ್ನೇ ಹೇಳಲಿ ಎಂದು ಬಯಸುವ ನಾವು, ಇನ್ನೊಬ್ಬರಿಗೆ ನಮಗೆ ಗೊತ್ತಿಲ್ಲದ ವಿಳಾಸವನ್ನು ತಿಳಿದವರನ್ತೆ ಹೇಳಿ ಪೋಸ್ ಕೊಡುತ್ತೇವೆ….ಇತ್ಯಾದಿ..ಇತ್ಯಾದಿ..

ಗೆಳೆಯರೆ, ಯಾವುದೋ ಒಂದು ಅವ್ಯಕ್ತ ಶಕ್ತಿಯ ಆನಾವರಣದಿಂದಲೋ, ಅಥವಾ ಇನ್ನಾವುದೋ ಅಜ್ಞಾತ ಶಕ್ತಿಯ ಅವತಾರದಿಂದ ಜಗತ್ತು ಬದಲಾಗುವ ಪವಾಡದ ನಿರೀಕ್ಷೆ ಬೇಡ. ನಮ್ಮನ್ನು ನಾವು ಬದಲಿಸಿಕೊಳ್ಳುವ ಮೂಲಕ ಜಗತ್ತನ್ನು ಬದಲಿಸುವ ಪ್ರತೀಕ್ಷೆ ಇರಲಿ. ನಮ್ಮೊಳಗಿರುವ ನಮ್ಮನ್ನು ಅರಿತು, ಬದಲಾಗೋಣ. ಈ ದಿಶೆಯಲ್ಲಿ ಚಿಂತಿಸುವ ಆಶಯದೊಂದಿಗೆ ಈ ನಾಲ್ಕು ನುಡಿಗಳು…ಪ್ರೀತಿಯಿರಲಿ…

Advertisements

Responses

  1. Very True

  2. nivu heluttiruvadu satya.adare yaru idara bagge talekedisikolluvadilla.pavan

  3. hi,thumbha chennagide.naavu sari eddare alla sari erutte antha elida maathu nija. i like it. thank u. how ru pavan.


ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

ವಿಭಾಗಗಳು

%d bloggers like this: