Posted by: pavankir | ಫೆಬ್ರವರಿ 8, 2009

ಸಮಯವೇ ಇಲ್ಲದವರಿಗೆ…!

ಬದಲಾವಣೆ ಜಗದ ನಿಯಮ. ಕಾಲ ಚಕ್ರಾರ ಗಚ್ಛತಿಃ. ಈಗ ಕಾಲ ಬದಲಾಗಿದೆ, ಎಲ್ಲದರಲ್ಲೂ ಸ್ಪರ್ದೆ, ಮಾನವ ಮೌಲ್ಯಗಳು ಕುಸಿದಿವೆ. ಯಾಂತ್ರಿಕೃತ ಬದುಕು ನಮ್ಮದಾಗಿದೆ. ಹಣಗಳಿಸುವಿಕೆ ಮನುಷ್ಯನ ಮೊದಲ ಆದ್ಯತೆಯಾಗಿದೆ. ಕೇವಲ ದುಡಿಮೆ, ಹಣ, ಆಸ್ತಿ, ಅಂತಸ್ತುಗಳ ಭರಾಟೆಯಲ್ಲಿ ನಾವು ಮಾನವೀಯ ಮೌಲ್ಯಗಳನ್ನು ಮರೆತಿದ್ದೇವೆ. ನಾವು  ಗಳಿಸುವುದಕ್ಕಿಂತ ಕಳೆದುಕೊಳ್ಳುತ್ತಿರುವುದೇ ಹೆಚ್ಚು. ಈ ಸರಳ ಸತ್ಯದ ಅನಾವರಣ ಮಾಡಿಸುವ ಕಿರುಗತೆ ಇಲ್ಲಿದೆ.

ದಿನ ನಿತ್ಯವೂ ತಡ ರಾತ್ರಿ ಮನೆಗೆ ಬರುವ ಐ ಟಿ ಉದ್ಯೋಗಸ್ತ ನಮ್ಮ ಕಥಾ ನಾಯಕ. ಎಂದಿನಂತೆ ಇಂದೂ ತಡವಾಗಿ ಮನೆಗೆ ಬಂದಿದ್ದಾನೆ. ಬರುತ್ತಿರುವವನನ್ನೇ ಎದುರುಗೊಂಡ ಏಳು ವರ್ಷದ ಮಗ ಸಂದೀಪ್, ಮೊದಲಾಗಿ ಮುಂದಿತ್ತ ಪ್ರಶ್ನೆ, ” ಅಪ್ಪಾ, ಒಂದು ಗಂಟೆ ಕೆಲಸ ಮಾಡಿದ್ರೆ ನಿಂಗೆ ಎಷ್ಟು ದುಡ್ಡು ಸಿಗುತ್ತೆ?”.  ಮೊದಲೇ ಕೆಲಸ ಮಾಡಿ ಆಯಾಸವಾಗಿದ್ದ ತಂದೆ, ” ಅದು ನನ್ನ ಬ್ಯುಸಿನೆಸ್, ಅದೆಲ್ಲಾ ನಿಂಗ್ಯಾಕೋ?, ಗಂಭೀರವಾಗಿ ಕೇಳಿದ. ಆದರೂ ಬಿಡದೆ ಹೇಳುವಂತೆ ಹಟ ಹಿಡದ ಮಗನಿಗೆ ತಂದೆ, 500 ರೂ ಎಂದ. “ಹಾಗಾದ್ರೆ, ನಗೆ 300 ರೂ ಕೊಡು” ತಕ್ಷಣ ಬಂತು ಮಗನ ಉತ್ತರ.  ಕೇವಲ  ತನ್ನ ಯಾವುದೋ ಒಂದು ಆಟಿಕೆಗೋ, ಅಥವಾ ಇನ್ನಾವುದೋ ತಿಂಡಿ ಕೊಳ್ಳಲು ಇಂತಹ ಒಂದು ಪ್ರಶ್ನೆಯನ್ನು ಕೆಳಿದನಲ್ಲಾ ತನ್ನ ಮಗ ಎಂದು ಕೋಪಗೊಂಡ ತಂದೆ, “ಆರ್ದ ರಾತ್ರಿ ಕಳೆದಿದೆ, ನಿನಗೆ  ಮುದ್ದು ಮಾಡಿದ್ದು ಅತಿಯಾಯ್ತು, ಹೋಗಿ ಮಲಗು, ದುಡ್ಡು ಇಲ್ಲ ಏನು ಇಲ್ಲ” ಎಂದ. ಅಲ್ಲಿ ತಲೆ ತಗ್ಗಿಸಿದ ಮಗ ಮತ್ತೆ ತಲೆ ಎತ್ತದೆ ಹೋಗಿ ಮಲಗಿದ.

ಆರ್ದ ಗಂಟೆ ಕಳೆಯುವುದರೊಳಗೆ ತನ್ನ ವರ್ತನೆಗೆ ಬೇಸರಗೊಂಡ ತಂದೆ ಮಗನನ್ನು ಸಮಾಧಾನ ಮಾಡಲೆಂದು, ಅವನನ್ನು ಕರೆದು ಮುದ್ದಿಸಿ ಅವನಿಗೆ 300 ರೂ ಗಳನ್ನು ಕೊಟ್ಟ. ಸಂದೀಪನಿಗಾದ ಆನಂದಕ್ಕೆ ಪಾರವೇ ಇರಲಿಲ್ಲ, ಅವನ ಕಾಸಗಲದ ಮೊಗವನ್ನು ಊರಗಲ ಮಾಡಿ ತನ್ನ ಅಂಗಿಯ ಜೇಬಿನಿಂದ ಮತ್ತಷ್ಟು ನೋತುಗಳನ್ನು ಹೊರತೆಗೆದ. “ನಿನ್ನಲ್ಲಿ ದುಡ್ಡು ಇದ್ದಂತೆಯೇ ಮತ್ತೆ ಮತ್ತೆ ದುಡ್ಡು ಕೇಳ್ತಿಯೇನೋ?, ನಿನ್ನದ್ದು ಅತಿಯಾಯ್ತು.” ಮತ್ತೆ ಸಿಟ್ಟಿಗೆದ್ದ ತಂದೆ. ” ಇಲ್ಲ ಅಪ್ಪ, ನನ್ನಲ್ಲಿರುವ ದುಡ್ಡು ಕಡಿಮೆ ಇತ್ತು ಹಾಗಾಗಿ ಕೇಳ್ದೆ”, ಎನ್ನುತ್ತಾ ಮತ್ತೆ ಹಣ ಎಣಿಸುವುದರಲ್ಲಿ ತಲ್ಲೀನನಾದ ಸಂದೀಪ್. ಹಳೆಯ, ಹೊಸ, ಹರಿದ ಎಲ್ಲ ನೋಟುಗಳನ್ನು ಸೇರಿಸಿ ” ಅಪ್ಪ, ತಗೋ ಅಪ್ಪ, ನನ್ನಲ್ಲಿ 500 ರೂ ಇದೆ, ನಿನ್ನ ಒಂದು ಗಂಟೆಯ ದುಡಿಮೆ, ನಾಳೆ ಒಂದು ಗಂಟೆ ಬೇಗ ಮನೆಗೆ ಬಾ. ನಂಗೆ ನಿನ್ನ ಜೊತೆ ಊಟ ಮಾಡ್ಬೇಕು ಅಂತ ಆಸೆ…ಪ್ಲೀಸ್ ಬೇಗ ಬಾರಪ್ಪ” ಎನ್ನುತ್ತಾ ತನ್ನಲ್ಲಿದ್ದ 500 ರೂಪಾಯಿಗಳನ್ನು ನೀಡಿದ. ಮಗನ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಿದ್ದ ತಂದೆಗೆ ತನ್ನ ಮಗನ ಮಂಜು ತುಂಬಿದ ಕಣ್ಣಿನಲ್ಲಿ ಕಾಣಿಸುತ್ತಿದ್ದ ತನ್ನದ್ದೇ ಪ್ರತಿಬಿಂಬ ತನ್ನನ್ನೇ ಬೆರಳೆತ್ತಿ ಅಣಕಿಸುವಂತೆ ಭಾಸವಾಗುತ್ತಿತ್ತು.

ಗೆಳೆಯರೆ, ಯೋಚಿಸಿ ನೋಡಿ, ನಾವು ನಮ್ಮನ್ನು ಪ್ರೀತಿಸುವವರಿಗಾಗಿ ಕೆಲ ಸಮಯವನ್ನಾದರೂ ಮೀಸಲಿಟ್ಟಿದ್ದೇವೆಯೇ? ತ್ಯಾಗ ಸುಖಕ್ಕಿಂತ ಬೋಗ ಸುಖ ದೊಡ್ಡದ್ದಲ್ಲ. ನಮ್ಮನ್ನು ಪ್ರೀತಿಸಿದವರು ನಮ್ಮನ್ನು ಕೊಂಡು ಕೊಳ್ಳುವ ದಿನ ಬಾರದಿರಲಿ. ನಮ್ಮ ಯಾಂತ್ರಿಕೃತ ಬದುಕಿನ ನಡುವೆ ಪ್ರೀತಿಗೆ ಸ್ವಲ್ಪ ಸ್ಥಳವಿರಲಿ, ವ್ಯಾವಹಾರಿಕ ಜಂಜಾಟದ ನಡುವೆ ಪ್ರೀತಿಗೆ ಸ್ವಲ್ಪ ವಾದರೂ ಬೆಲೆ ಇರಲಿ. ಜೀವನದ ಗುರಿ ಕೇವಲ ಹಣಗಳಿಸುವುದೇ? ನಮ್ಮ ಜೀವನದ ಎಲ್ಲ ಸುಖ, ಸಂತೋಷ  ಪ್ರೀತಿ, ಸಂಬಂಧಗಳನ್ನು ಬಲಿ ಕೊಟ್ಟು ನಾವು ಹಣ ಸಂಪಾದಿಸುತ್ತೇವೆ, ನಂತರದಲ್ಲಿ ಅದೇ ಹಣವನ್ನು ವ್ಯಯ ಮಾಡಿ ಪ್ರೀತಿ, ಸುಖವನ್ನು ಅರಸ ಹೊರಡುತ್ತೇವೆ. ಅದಕ್ಕೆ ಅಲ್ಲವೇ ಡಾ|| ಶಿವರುದ್ರಪ್ಪ ಅವರು ಹೆಳಿದ್ದು, – ಪ್ರೀತಿ ಇಲ್ಲದ ಮೇಲೆ ಹೂವು ಅರಳೀತು ಹೇಗೆ? ಪ್ರೀತಿ ಇಲ್ಲದ ಮೇಲೆ ಮೋಡ ಕಟ್ಟೀತು ಹೇಗೆ? ಎಂದು. ಏನನ್ನುತ್ತೀರಿ?

Advertisements

Responses

 1. thumbaa satya……
  G. S. S avaraddE innondu saalu ide….
  ellO huDukide illada dEvara kallu maNNugaLa guDiyoLage…
  illE iruva preeti snEhagaLa gurutisadaadenu nammoLage anta…

 2. ಸತ್ಯವನ್ನು ಚುಟುಕಾಗಿ ಹೇಳಿದ್ರಿ ಸರ್.. 🙂

 3. baravanige chennagide…. ondondu chikka chikka kate blog na chenda hechiside… bareeta iri… all the best

 4. ಪವನ,

  ಹಳೆಯ ಕಥೆಯಾದರೂ, ಪ್ರೇಸೆಂಟೆಷನ್ ಚೆನ್ನಾಗಿದೆ, ಮುಂದುವರೆಸಿ..

  -ಮೌನಿ

 5. yuva premigalige olleya dhari deepa…

 6. adhbhuta sathya


ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

ವಿಭಾಗಗಳು

%d bloggers like this: