Posted by: pavankir | ಫೆಬ್ರವರಿ 7, 2009

ದುಡಿದಲ್ಲೇ ಮಡಿದ ಮಹಾತ್ಮ….!

ಕಪಟ ನಾಟಕ ರಂಗ...

ಕಪಟ ನಾಟಕ ರಂಗ...

ಜಾತಸ್ಯ ಮರಣಂ ಧೃವಂ. ಸಾವು ಸಹಜವೇ, ಆದರೆ ಸಾವಿಗೊಂದು ಅರ್ಥ ಬೇಕು. ಬರಿದೆ ಸಾಯುವುದಕ್ಕೆ ಅರ್ಥ ಇಲ್ಲ. ಆದುದರಿಂದಲೇ ಬಲ್ಲವರು ಹೆಳಿದ್ದು, “ಶರಣರ ಗುಣವನ್ನು ಮರಣದಲ್ಲಿ ನೋಡು” ಎಂದು. ಕೇವಲ ಬದುಕಿರುವಾಗ ಮಾತ್ರವಲ್ಲ ಸಾಯುವಾಗಲೂ ಆದರ್ಶವನ್ನು ತೋರುವ ಹಿರಿತನ, ಯೋಗ ಎಲ್ಲರಿಗೂ ಬರಲಾರದು. ರಣರಂಗದಲ್ಲಿ ಮಡಿಯುವ ವೀರ ಯೋಧನಂತೆ ಸದ್ದಿಲ್ಲದೇ ಮರೆಗೆ ಸರಿದವರು ಯಕ್ಷಜ್ಞ ಶಂಭು ಹೆಗದೆಯವರು.

ಯಕ್ಷ ಕಲಾ ಮಾತೆಯ ಕಿರೀಟದ ತುರಾಯಿ, ಜಾನಪದ ಜಗತ್ತಿನ ಹೊನ್ನ ಕಳಶ, ಬಡಗು ತಿಟ್ಟಿನ ಯಕ್ಷ ರವಿ ಶಂಭು ಹೆಗಡೆ ಇನ್ನಿಲ್ಲವಾಗಿದ್ದಾರೆ. ಮೊನ್ನೆ ರಥಸಪ್ತಮಿಯಂದು ಮೂಡಣದಲ್ಲಿ ಸೂರ್ಯ ಉದಯಿಸುವ ಕಾಲಕ್ಕೆ ಕರಾವಳಿಯ ಯಕ್ಷಾರ್ಕ ಅಸ್ಥಂಗತನಾಗಿದ್ದ. ಯಕ್ಷ ರಂಗವನ್ನು ತಬ್ಬಲಿಯಾಗಿಸಿ ಶಂಭು ಹೆಗಡೆಯವರು ಮತ್ತೆಂದೂ ಬಾರದ ಲೋಕಕ್ಕೆ ತೆರಳಿದ್ದಾರೆ. ಯಕ್ಷಗಾನಕ್ಕೆ ತಾರಾ ಮೌಲ್ಯ ತಂದಿತ್ತ ಕರಾವಳಿಯ ಅನರ್ಘ್ಯ ರತ್ನಕ್ಕೆ ಈ ನುಡಿ ನಮನ.

1938 ರಲ್ಲಿ ಯಕ್ಷಗಾನದ ಭದ್ರ ಪರಂಪರೆಯುಳ್ಳ ಕೆರೆಮನೆ ವಂಶದಲ್ಲಿ ಶಿವರಾಮ ಹೆಗಡೆಯವರ ಮಗನಾಗಿ ಹುಟ್ಟಿದ ಈ ಅಭಿಜಾತ ಕಲಾವಿದ, ತನಗೆ ಬಳುವಳಿಯಾಗಿ ಬಂದ ಯಕ್ಷಗಾನ ಕಲೆಯಲ್ಲಿ ಕೃಷಿ ಮಾಡಿದವರು. ಅಸ್ಖಲಿತ ವಾಕ್ ಚಾತುರ್ಯ, ಭಾವಪೂರ್ಣ ಆಂಗಿಕ ಅಭಿನಯ, ಶಾಸ್ತ್ರೀಯ ಶಿಸ್ತು ಬದ್ದ ಲಯಪೂರ್ಣ ಕುಣಿತ ಹೀಗೆ ಎಲ್ಲದರಲ್ಲೂ ತಮ್ಮದೇ ಆದ ಛಾಪು ಮೂಡಿಸಿದ್ದರು. ಸಂಪ್ರದಾಯದ ಪರಿದಿಯನ್ನು ಮೀರದೆ, ಶಾಸ್ತ್ರೀಯತೆಯನ್ನು ಒತ್ತಟ್ಟಿಗಿಡದೆ, ಪರಂಪರೆಯ ಚೌಕಟ್ಟಿನಲ್ಲಿಯೆ ಹೊಸತನ್ನು ಹುಟ್ಟು ಹಾಕಿದವರು. ಅರ್ಧ ಚಂದ್ರಾಕೃತಿಯ ರಂಗ ಸಜ್ಜಿಕೆ, ಕರುಣಾರಸಕ್ಕೆ ಅಭಿನಯ, ಕಾಲಮಿತಿ ಪ್ರಯೋಗ, ಯಕ್ಷಗಾನದ ಬಗೆಗಿನ ವಿನೂತನ ಚಿಂತನೆ ಇವೆಲ್ಲ ಅವರ ಕಲ್ಪನೆಯ ಕೂಸು.

ಕರುಣಾರಸದ ಕರ್ಣ, ಚಂದ್ರಹಾಸ ಚರಿತ್ರೆಯ ದುಷ್ಟಬುದ್ಡಿ, ಸೀತಾವಿಯೋಗದ ರಾಮ, ನಿರ್ಯಾಣದ ರಾಮ, ಹರಿಶ್ಚಂದ್ರ, ನಳ, ದುರ್ಜಯ, ಕೃಷ್ಣ, ಮೊದಲಾದ ಪಾತ್ರಗಳಿಗೆ ಜೀವ ತುಂಬಿದವರು ಶಂಭು ಹೆಗಡೆಯವರು. ವಿಷೆಶವಾಗಿ ರಾಮನ ಪಾತ್ರದಲ್ಲಿ ಅಭಿನವ ರಾಮನಾಗುತ್ತಿದ್ದರು. ಮೊನ್ನೆಯೂ ರಾಮನಾಗಿ ಮೊದಲಭಾರಿ ಗೆಜ್ಜೆ ಕಟ್ಟಿದ ಸ್ಥಳದಲ್ಲೇ  ಕೊನೆಯ ಬಾರಿ ಹೆಜ್ಜೆ ಹಾಕಿ ನಿರ್ಯಾಣ ಹೊಂದಿದರು.

ಯಕ್ಷಗಾನ ನನ್ನುಸಿರು

ಯಕ್ಷಗಾನ ನನ್ನುಸಿರು

ನಾಲ್ಕೈದು ದಶಕಗಳ ಕಾಲ ವೃತ್ತಿ ಮೇಳಗಳಲ್ಲಿ ಬಣ್ಣ ಹಚ್ಚಿ ನೋವು ನಲಿವುಂಡ ಕಲಾವಿದಾನುಬ್ಬ ಮುಂದಿನ ಪಿಳಿಗೆಗೆ ಯಕ್ಷಗಾನವನ್ನು ಉಳಿಸಿ ಕೊಡುವಲ್ಲಿ ಮಾಡಬಹುದಾದ ಎಲ್ಲ ಪ್ರಯತ್ನವನ್ನು ಮಾಡಿದ್ದರು. ಸಾಂಸ್ಕೃತಿಕ ರಾಯಭಾರಿಯಾಗಿ ದೇಶ ವಿದೆಶಗಳಲ್ಲಿ ಯಕ್ಷಗಾನದ ಕೀರ್ತಿ ಪಸರಿಸಿದ್ದರು. ರಾಜ್ಯ, ರಾಷ್ಟ್ರ, ಕೇಂದ್ರ ಅಕಾಡೆಮಿ ಪ್ರಶಸ್ತಿಗಳ ಸಹಿತ ಅವರಿಗೆ ಸಂದ ಗೌರವಗಳು ಅಗಣಿತ. ಆದರೆ ಎಲ್ಲ ಪ್ರಶಸ್ತಿ ಪುರಸ್ಕಾರ, ಸನ್ಮಾನಗಳಿಗಿಂತಲೂ ಮಿಗಿಲಾದ ಪುರಸ್ಕಾರವನ್ನು ಸಾವಿನಲ್ಲಿ ಸಾಧಿಸಿ, ಸಿದ್ದಿಸಿ ತೋರಿಸಿದ್ದಾರೆ. ಮಹಾತ್ಮರು ಮಾತ್ರ ಪಡೆಯಬಹುದಾದ ಪುಣ್ಯರೂಪಿ ಸಾವನ್ನು ಪಡೆದು ಯಕ್ಷರಂಗದಲ್ಲಿ ತಮ್ಮ ಹೆಸರನ್ನು ಚಿರಸ್ಠಾಯಿಯಾಗಿಸಿದ್ದಾರೆ. ಅವರಿಂದ ಆನಾವರಣಗೊಂಡ ಹೊಸತನವನ್ನು,ಯಕ್ಷಗಾನ ಕಲೆಯನ್ನು ಉಳಿಸಿ, ಬೆಳೆಸಿ, ಪ್ರೋತ್ಸಾಹಿಸಬೇಕಾದ ಹೊಣೆ ನಮ್ಮ ಮೇಲಿದೆ.

ಉದಯವಾಣಿ

ಕೃಪೆ: ಉದಯವಾಣಿ

ಅಸ್ತಮಿಸಿದ ಯಕ್ಷ ಭಾಸ್ಕರನಿಗೆ, ಆಗಲಿದ ಮಹಾ ಚೇತನಕ್ಕೆ ಇದೋ ಭಾವಪೂರ್ಣ ಆಶ್ರು ತರ್ಪಣ.

Advertisements

Responses

  1. Shambhu hegaDe yavara vEsha naanu nODilla…
    aadare inthaha saathaka saavu eShTu janakke sikkkeetu? tamma usire aagidda kaleya kainkaryadallE koneyusireLeva saubhaagya…

  2. ತುಂಬ ಅರ್ಥಪೂರ್ಣ ಭಾವಂಜಲಿ …


ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

ವಿಭಾಗಗಳು

%d bloggers like this: