Posted by: pavankir | ಡಿಸೆಂಬರ್ 22, 2008

ಮಾತನಾಡುವ ಮೊದಲು ಒಂದೆರಡು ನಿಮಿಷ…

ಇತ್ತೀಚಿಗೆ ರಾಜಕಾರಣಿಯೊಬ್ಬರು ತಮ್ಮ ಬೇಜವಾಬ್ದಾರಿಯುತವಾದ ಹೇಳಿಕೆ ನೀಡಿ ಸುದ್ದಿ ಮಾಡಿದ್ದರು. ಅಂತವರಿಗೆ ತಮ್ಮ ಮಾತಿನ ಪರಿಣಾಮವಾಗಲಿ, ಸಮಾಜದಲ್ಲಿ ಅವರಿಗಿರುವ ಜವಾಬ್ದಾರಿಯಾಗಲಿ ಸ್ವಲ್ಪವೂ ತಿಳಿದಿರುವುದಿಲ್ಲ. ಇದು ಪ್ರಾಯಶಃ ಪ್ರತಿ ದಿನದ ವಾರ್ತಾ ವಿಶೇಷ. ನಮ್ಮ ಸೋ ಕಾಲ್ಡ್ ನಾಯಕರು, ಸಿನಿಮಾ ತಾರೆಯರು, ಕ್ರಿಕೆಟ್ ತಾರೆಯರು, ತಮ್ಮನ್ನು ತಾವೇ ಬುದ್ದಿಜಿವಿಗಳೆಂದು ಘೊಷಿಸಿಕೊಳ್ಳುವವರು ದಿನ ದಿನವೂ ಒಂದಂಲ್ಲ ಒಂದು ವಿವಾದಯುತಾವಾದ ಹೇಳಿಕೆ ನೀಡುತ್ತಿರುತ್ತಾರೆ. ಇನ್ನೊಬ್ಬರ ಕುರಿತಾದ ಹೇಳಿಕೆಗಳನ್ನು ನಾವೂ ನೀಡುತ್ತಿರುತ್ತೇವೆ. ಆದರೆ ಅದೇ ಇನ್ನೊಬ್ಬರ ಸ್ಥಾನದಲ್ಲಿ ನಿಂತು ಯೋಚಿಸಿದರೆ ನಮ್ಮ ಹೇಳಿಕೆಗಳು ಪ್ರಾಯಶಃ ಬದಲಾಗಬಹುದೇನೋ?

ಮ್ಮ ಸಮಾಜದ ಮುಖ ವಾಹಿನಿಯಲ್ಲಿ ಬರುವ ಇಂತವರು ಮಾತ್ರವಲ್ಲ, ನಾವೂ ನೀವೂ ಎಲ್ಲರೂ ಇನ್ನೊಬ್ಬರ ಬಗ್ಗೆ ಹಗುರವಾಗಿ ಮಾತಾಡುತ್ತಿರುತ್ತೇವೆ. ನಮಗೆ ಇನ್ನೊಬ್ಬರ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವ ವಿಶಾಲ ಹೃದಯದ ಕೊರತೆ ಇದೆ. ಇನ್ನೊಬ್ಬರ ಕುರಿತಾಗಿ ಎನ್ನನ್ನಾದರೂ ಮಾತಾಡುವ ಮೊದಲು ಒಂದೆರಡು ನಿಮಿಷ ಯೋಚಿಸಬೇಕು ಎಂಬುದಕ್ಕೆ ಒಂದು ಸುಂದರ ನೀತಿಪೂರ್ಣ ನಿದರ್ಶನ ಇಲ್ಲಿದೆ.

ಆಗತಾನೆ ಮದುವೆಯಾದ ಶಾಲಿನಿ ತನ್ನ ಗಂಡನೊಡನೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದಳು. ಹೊಸ ಜಾಗಗಳನ್ನೂ ನೋಡುವ ಕೌತುಕದಲ್ಲಿ ಶಾಲಿನಿ ಕಿಟಕಿಯಂಚಿನಲ್ಲಿ ಕುಳಿತಿದ್ದರೆ, ಸುಂದರಿ ಹೆಂಡತಿಯನ್ನು ಪಡೆದ ಗಂಡ ಜಗತ್ತನ್ನೇ ಗೆದ್ದಂತೆ ಬೀಗುತ್ತಿದ್ದ. ಸ್ವಲ್ಪದರಲ್ಲೇ, ಇವರ ಎದುರಿನ ಸೀಟಿನಲ್ಲಿ ಅರವತ್ತರ ಅಶಕ್ತ ತಂದೆ, ತನ್ನ ಮೂವತ್ತರ ಹರೆಯದ ಮಗನನ್ನು ಕರೆದುಕೊಂಡು ಬಂದು ಕುಳಿತನಿಧಾನವಾಗಿ ಸಾಗುತ್ತಿದ್ದ ರೈಲಿನ ಕಿಟಕಿಯಾಚೆ ಚಲಿಸಿದ ಹಾಗೆ ಕಾಣುವ ಮರಗಳನ್ನು ನೋಡಿದ ಮಗ ಸಂತೂಷದಿಂದ ಚಪ್ಪಾಳೆ ತಟ್ಟುತ್ತಿದ್ದ. ಮುಂದುವರೆದಂತೆ, ಬೀಸುವ ಗಾಳಿಗೆ ತನುವೊಡ್ಡಿದ ಭತ್ತದ ತೆನೆಗಳನ್ನು ನೋಡಿ ಹಾಡತೊಡಗಿದ. ಇದನ್ನು ಕಂಡ ಶಾಲಿನಿಗೆ ಕಿರಿಕಿರಿಯೆನಿಸಿತು. ತನ್ನ ಅಸಮಾಧಾನವನ್ನು ಗಂಡನಲ್ಲಿ ತೋಡಿಕೊಂಡಳು. ಇನ್ನೂ ಸ್ವಲ್ಪ ಮುಂದುವರೆದಂತೆ ಸಣ್ಣನೆ ಬೀಳುತ್ತಿದ ಮಳೆ ಹನಿಗಳನ್ನು ಕಂಡ ಅವನು ತನ್ನ ಸಂತೋಷವನ್ನು ತಾಳಲಾರದೆ ಕುಣಿದಾಡತೊಡಗಿದ. ತನ್ನ ಮುದ್ದು ಹೆಂಡತಿಯ ಅಸಹಣೆಗೆ ಕಾರಣವಾದ, ತಂದೆ ಮಗನನ್ನು ವಿಚಾರಿಸದೆ ಬೇರೆ ದಾರಿ ಕಾಣದೆ, ಶಾಲಿನಿಯ ಗಂಡ ಅವರಿಬ್ಬರನ್ನು ಗುರಾಯಿಸತೊಡಗಿದ. ಶಾಲಿನಿ ತಾಳಲಾರದೆಏನ್ರೀ, ನಿಮಗೆ ಸ್ವಲ್ಪನೂ ಬುದ್ದಿ ಇಲ್ವಾತಲೆ ಕೆಟ್ಟಿರೊ ಮಗನನ್ನು ಹೇಗೆ ಇಟ್ಕೋ ಬೇಕು ಅಂತ ಗೊತ್ತಿಲ್ವಾ? ನಮಗೆಲ್ಲಾ ಯಾಕ್ರಿ ತೊಂದರೆ ಕೊಡ್ತೀರಾ? ದಯವಿಟ್ಟು ಹುಚ್ಚನ್ನ ಇಲ್ಲಿಂದ ಕರೆದುಕೊಂಡು ಹೋಗಿಎಂದು ಕಿರುಚಾಡಿದಳು. ಪರಿಸ್ಥಿತಿ ಅರಿತ ತಂದೆ ಕೈ ಮುಗಿದು, “ಅಮ್ಮಾ, ದಯವಿಟ್ಟು ಬೇಸರ ಮಾಡಿಕೊಳ್ಳಬೇಡಿ. ಇವನು ನನ್ನ ಮಗ ಆದ್ರೆ ಇವನಿಗೆ ತಲೆ ಕೆಟ್ಟಿಲ್ಲಾ ತಾಯಿ. ಹುಟ್ಟಿದಂದಿನಿಂದಲೂ ಇವನಿಗೆ ಕಣ್ಣು ಕಾಣಿಸ್ತಾ ಇರ್ಲಿಲ್ಲ, ನಿನ್ನೆ ತಾನೇ ಆಪರೆಷನ್ ಮಾಡಿ ಇವ್ನಿಗೆ ಕಣ್ಣು ಬಂದಿದೆಯಮ್ಮ, ಇದೇ ಮೊದಲ ಬಾರಿಗೆ ಪ್ರಪಂಚವನ್ನು ತನ್ನ ಕಣ್ಣಿನಿಂದ ನೋಡ್ತಾ ಇದ್ದಾನೆ, ಅದಕ್ಕೆ ರೀತಿ ಆಡ್ತಾ ಇದ್ದಾನಮ್ಮ. ಒಂದು ಮಗು ಮೊದಲ ಬಾರಿಗೆ ಪ್ರಪಂಚ ನೋಡಿದ್ರೆ ಅಷ್ಟೇ ಯಾಕೆ, ಮೊದಲನೇ ಬಾರಿ ರೈಲು ಹತ್ತಿದ್ರೆ ಕುಣಿದಾಡಲ್ವ ತಾಯಿ ಹಾಗೇನೆ ನನ್ನ ಮಗನೂ ಕೂಡಾ, ದಯವಿಟ್ಟು ಕ್ಷಮಿಸಿ ಅಮ್ಮ. ನಿಮಗಾದ ತೊಂದರೆಗೆ ನಾನು ಕ್ಷಮೆ ಕೆಳ್ತೀನಿ ಆದ್ರೆ ನನ್ನ ಮಗನ್ನ ಮಾತ್ರ ಹುಚ್ಚ ಅಂತ ಹೇಳಬೇಡಿಎಂದು ಶಾಲಿನಿಗೆ ಕ್ಷಮೆ ಕೇಳಲು ಅವಕಾಶವನ್ನು ಕೊಡದೇ ಕಣ್ಣೀರಿಡುತ್ತಾ ತನ್ನ ಮಗನ ಕೈ ಹಿಡಿದು ಕರೆದೊಯ್ದರು…..

ಒಂದೆರಡು ನಿಮಿಷ ಯೋಚಿಸಿ ನೋಡಿ..! ನಮಗೂ ಶಾಲಿನಿಗಾದಂತೆ ಕ್ಷಮೆ ಕೇಳುವ ಅವಕಾಶವೂ ತಪ್ಪಿಹೋಗಿರಬಹುದಲ್ಲವೇ? ಮಾತು ಎಲ್ಲವನ್ನು ನಿರ್ದರಿಸುತ್ತದೆ. ಅದು ಹರಿಯುವ ನೀರಿನ ಹಾಗೆ..ಒಮ್ಮೆ ಹರಿದ ನೀರನ್ನು ಮತ್ತೊಮ್ಮೆ ಅದೇ ಸ್ಥಳದಿಂದ ನಾವು ಮುಟ್ಟಲಾರೆವು, ಮಾತು ಕೂಡಾ. ಯಾವುದೇ ಸಂದರ್ಭವಿರಲಿ, ಎಂತಹ ಸಂದಿಗ್ದತೆಯಿರಲಿ, ನಾವು ಒಂದು ಮಾತನ್ನು ಆಡುವ ಮೊದಲು ಒಂದೆರಡು ನಿಮಿಷ ಯೂಚಿಸೊಣ. ಏಕೆಂದರೆ ಇನ್ನೊಬ್ಬರ ಮನಸನ್ನು ನೋಯಿಸುವ ಹಕ್ಕು ನಮಗಿಲ್ಲ. ಪರಿಸ್ಥಿತಿಯ ತೀವ್ರತೆಯನ್ನು ಅರ್ಥ ಮಾಡಿಕೊಳ್ಳಲು ನಾವು ಇನ್ನೊಬ್ಬರ ಸ್ಥಾನದಲ್ಲಿ ನಿಂತು ಯೊಚಿಸೊಣ. ಇದನ್ನೆಲ್ಲ ಅರಿತ ಸರ್ವಜ್ಞ ಮೊದಲೇ ಎಚ್ಚರಿಸಿದ್ದ – 

ಮಾತಿನಿಂದಲೆ ಇಹವು ಮಾತಿನಿಂದಲೆ ಪರವು

ಮಾತಿನಿಂದಲೆ ಸಕಲ ಸಂಪದವು

ಮಾತ ತಾನ್ ಅರಿಯದದಮಂಗೆ ಮಾಣಿಕವು ತೂತು ಬಿದ್ದಂತೆ ಸರ್ವಜ್ಞ ||

ಇನ್ನಾದರೂ ನಾವು ಮಾತಡುವ ಮೊದಲು ಒಂದೆರಡು ನಿಮಿಷ ಯೋಚಿಸೋಣ. ಏನೆನ್ನುತ್ತೀರಿ?…..

Advertisements

Responses

  1. u are 100% right….
    nijavagloo neenu chennagi baritiya
    font swalpa chikkadu maadu chennagi kaaniutte

  2. priyare, nimma ella baravanigegaglu kannadada nighantinalliruva ella padagalanuu hondiruvantide. andare nimmalliruva padabhandaara,shabdakosha pada mattu vaakya sampattininda tumbi tulukaaduttide.adu nimage divadattavaagi bandiruva vara. kaapadikolli. nimma preeti mattu premada vishayavaagi bareda( premigaladina kuritu)lekhanadalli ‘shatrugalabagge toruva preeiyalli naavu dvehavannu kannutteve” endiruvudu swalpa asamanjasavaagide. adannu Dweshakke badalaagi antahkarana ennonave? swalpa nimma sahaja dictionary yalli hudikinoodi idakintaloo olleya pada dorakabahudu.

    innondu nimma innondu katheyalli mudukigeno bangaarada murthy sikkitu avalige allinda shubravaagiruva aalochane holeyitu emba kathavasthu chennagide. Aadare ellara baalina tiruvigoo inthaha chinnada avakaasha sigabekalla.irali nimma shrama kolakuthumbiruva ee samajavannu gudisi chokkatavaagiduva ondu porakeyantaagali endu ashisuva nimma hiriya mitra amerikeya varginiyaadinda bharathada alla karnaatakada adralloo malenaadina kodalipeteyabali iruva arakalagudu talukina mallipatna hobli aaladahalliya praje kannadiga sampath.


ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

ವಿಭಾಗಗಳು

%d bloggers like this: