Posted by: pavankir | ಡಿಸೆಂಬರ್ 20, 2008

ಜೀವನದ ಅರ್ಥ…..ಇನ್ನೊಬ್ಬರಿಗಾಗಿ ಬದುಕುವುದೇ?

ನಿಜವಾದ ಜೀವನದ ಅರ್ಥ ಇನ್ನೊಬ್ಬರಿಗಾಗಿ ಬದುಕುವುದೇ? ಬಹಲಷ್ಟು ಸಲ ಇದು ನಿಜವೆನಿಸುತ್ತದೆ. ನಾವೆಲ್ಲರೂ ಒಂದಲ್ಲ ಒಂದು ಅರ್ಥದಲ್ಲಿ ಇನ್ನೊಬ್ಬರಿಗಾಗಿ ಬದುಕುತ್ತಿರುತ್ತೇವೆ. ಇನ್ನೊಬ್ಬರಿಗಾಗಿ ಬದುಕುವುದರಲ್ಲಿ ಸಿಗುವ ಸಂತೋಷ ಪ್ರಾಯಶಃ ಬೇರೊಂದರಲ್ಲಿ ಸಿಗಲಾರದೇನೋ? ಇನ್ನೊಬ್ಬರು ಎಂದರೆ ಯಾರು? ಉತ್ತರ ಹುಡುಕ ಹೊರಟರೆ ಇವರು ಯಾರು ಯಾರೋ ಆಗಿರುತ್ತಾರೆ. ಇದನ್ನೇ ಪ್ರತಿಧ್ವನಿಸುವ ಒಂದು ಸುಂದರ ನಿದರ್ಶನ ಇಲ್ಲಿದೆ.
ಒಂದು ಪರಿಪೂರ್ಣ ಕುಟುಂಬದ ಗಂಡ ಹೆಂಡತಿಗೆ ಒಬ್ಬಳು ಮುದ್ಡಾದ ಮಗಳು. ಅವಳೇ ನಮ್ಮ ಕಥಾ ನಾಯಕಿಚಿತ್ರ ಬಿಡಿಸಿದಷ್ಟು ಸುಂದರವಾಗಿದ್ದ ಅವಳಿಗೆ ಚಿತ್ರ ಎಂದು ಹೆಸರಿಟ್ಟಿದ್ದರು. ಅವಳಿಗೆ ಕೇವಲ ಎಂಟು ವರ್ಷ. ಗುಣದಲ್ಲಿ ಅಪ್ಪಟ ಚಿನ್ನವಾದ ಅವಳು  ದಿನ ಏಕೋ ಚಿತ್ರಾನ್ನ ತಿನ್ನಲು ಹಠ ಮಾಡುತ್ತಿದ್ದಳು. ಅವಳನ್ನು ಸಮಾಧಾನ ಮಾಡಲು ಪರಿ ಪರಿಯಾಗಿ ಪ್ರಯತ್ನಿಸಿ ಸೋತು ಹೋದ ಅವಳಪ್ಪ ಕೊನೆಗೆ ಅವಳು ಕೇಳಿದ್ದನ್ನು ಕೊಡುವೆನೆಂದು ಒಪ್ಪಿಕೊಂಡ. ಎರೆಡೇ ನಿಮಿಷದಲ್ಲಿ ಎಲ್ಲವನ್ನು ತಿಂದೂ ಮುಗಿಸಿದ ಚಿತ್ರ ಅಪ್ಪನ ಎದುರಲ್ಲಿ ನಿಂತುಅಪ್ಪ, ನಾನು ಏನು ಕೇಳಿದರೂ ಕೊಡ್ತಿಯಲ್ಲ, ಹಾಗಾದರೆ ನನ್ನ ತಲೆ ಬೋಳು ಮಾಡಬೇಕುಎಂದಳು. ಏನೋ ಚಕಲೆಟೊ, ಬಿಸ್ಕೆಟೊ ಕೇಳಬಹುದೆಂದಿದ್ದ ಅವಳಪ್ಪನಿಗೆ  ಗರ ಬಡಿದ ಅನುಭವವಾಯಿತು, ಏಕೆಂದರೆ ಅವಳ ನೀಳ ಕೂದಲು ಅವರ ಮನೆತನದ ಪ್ರತಿಷ್ಟೆಯ ಸಂಕೇತ. ಅವಳ ಮನವೋಳಿಸಲು ಅವಳ ಅಮ್ಮ, ಪ್ರೀತಿಯ ಅಜ್ಜಿ, ನೆಚ್ಚಿನ ಆಂಟಿ ಎಲ್ಲರೂ ಪ್ರಯತ್ನಿಸಿದರು. ಅವಳ ಬೆಡಿಕೆಯನ್ನು ಬದಲಿಸಲು ಬಳಸಿದ ತಂತ್ರ ಗಳೆಲ್ಲಾ ವಿಫಲವಾದಾಗ ಕೊನೆಯಲ್ಲಿ ಅವಳ ಕೇಶ ಮರ್ದನಕ್ಕೆ ಮನೆಯವರೆಲ್ಲರ ವಲ್ಲದ ಮನಸ್ಸಿನ ಅಂಗೀಕಾರದ ಮುದ್ರೆ ಬಿತ್ತು.
ಮರು ದಿನ ಎಂದಿನಂತೆ ಅವಳನ್ನು ಶಾಲೆಗೆ ಕರೆದೊಯ್ದ ತಂದೆಗೆ ಅವಳ ಮುಖ ನೊಡಲು ಸಂಕಟವಾಗುತ್ತಿತ್ತು. ಆದರೂ, ಅವಳ ಎಳೆಯ ಕೆನ್ನೆಗೆ ಸಿಹಿ ಮುತ್ತಿಟ್ಟು ಕಾರಿನ ಬಾಗಿಲು ತೆಗೆದು ಕೆಳಗಿಳಿಸಿದ. ಚಿತ್ರಾ, ನಿನಗೇ ಕಾಯ್ತಿದ್ದೆ….ಬಾ ಹೋಗೋಣಎಂದು ಕೈ ಹಿಡಿದು ಕರೆದೊಯ್ದ ಅವಳ ಗೆಳೆಯನನ್ನು ನೋಡಿದ ತಂದೆಗೆ ಮತ್ತೊಮ್ಮೆ ಆಘಾತವಯಿತು, ಕಾರಣ ಅವನ ತಲೆಯೂಬೋಳಾಗಿತ್ತು“.ನೀವೇನಾ ಚಿತ್ರಳ ತಂದೆ ? ಅವಳಂಥ ಮಗಳನ್ನು ಪಡೆದ ನೀವೇ ಧನ್ಯರುಎಂಬ ನುಡಿ, ಕನಸ ಕಂಡಂತೆ ಕನವರಿಸುತ್ತಿದ್ದ ಅವನನ್ನು ಎಬ್ಬಿಸಿತು. ಅವನನ್ನು ಕರೆದು ಮತಾಡಿಸಿದ್ದ ಮಹಿಳೆಯೇ ಮಾತು ಮುಂದುವರೆಸಿದರು – “ಈಗ ನಿಮ್ಮ ಮಗಳ ಜೊತೆ ಹೋದನಲ್ಲ, ಅವನೆ ಪ್ರದಿಪ್, ನಾನು ಅವನಮ್ಮ. ಅವ್ನಿಗೆಬ್ರೈನ್ ಕ್ಯೂಮರ್ಆಗಿತ್ತು.ಅದೇ ಕಾರಣಕ್ಕೆ ಅವನ ತಲೆ ಕೂದಲು ತೆಗಿಸಬೇಕಾಯ್ತು. ಆದ್ರೆ ಅವನ ತಲೆ ಬೋಳಾದ ಮೇಲೆ ಅವನು ಶಾಲೆಗೆ ಬರಲು ಹಿಂಜರಿಯುತ್ತಿದ್ದ, ಅದಕ್ಕಿದ್ದ ಕಾರಣ ಅವನ ಗೆಳೆಯರ ಚುಚ್ಚು ನುಡಿ. ಆದರೆ, ಶಾಲೆಯಲ್ಲಿ ಯಾರೂ ಅಣಕಿಸದಂತೆ ಮಾಡುವೆನೆಂದು ಮಾತು ಕೊಟ್ಟ ನಿಮ್ಮ ಮಗಳು ಅವನಿಗಾಗಿ ತನ್ನ ಪ್ರೀತಿಯ ಕೂದಲನ್ನೇ ತ್ಯಾಗ ಮಾಡಿದ್ದಾಳೆ. ಶಾಲೆಗೂ ಬರದೇ, ಮನೆಯಲ್ಲಿಯೂ ಯಾರೊಂದಿಗೂ ಸೇರದೇ ಮಂಕಾಗಿದ್ದ ನನ್ನ ಮಗನ ಮುಖದಲ್ಲಿ ಇಂದು ನಗುವನ್ನು ಕಾಣುತ್ತಿರುವುದು ನಿಮ್ಮ ಮಗಳ ಕಾರಣದಿಂದ. ಇಷ್ಟು ಚಿಕ್ಕ ವಯಸ್ಸಿನ್ನಲ್ಲಿ ಇಂಥ ತ್ಯಾಗ ಮಾಡಿದ ಮಗಳನ್ನು ಪಡೆದ ನೀವು ನಿಜಕ್ಕೂ ಧನ್ಯರುಎಂದು ಕೈ ಮುಗಿದರು.
ಪ್ರದಿಪ್  ಕೈ ಹಿಡಿದು ನೆಡೆದು ಹೋಗುತ್ತಿದ್ದ ಚಿತ್ರಳನ್ನು ಕಂಬನಿ ತುಂಬಿದ ಕಣ್ಣುಗಳಿಂದ ನೊಡುತ್ತಾ ನಿಂತಿದ್ದ ಅವಳ ಅಪ್ಪನಿಗೆ, ಅವಳು, ಮನೆಯ ಹಿರಿಯರಿಗೆಲ್ಲರಿಗೂ ನೀತಿಯ ಪಾಠ ಹೆಳಲು ಬಂದ ಗುರುವಿನಂತೆ  ಕಾಣಿಸುತ್ತಿದ್ದಳು…..
ಈಗ ಹೇಳಿ, ನಾನು, ನನ್ನದು ಎಂಬ ಸ್ವಾರ್ಥ ಪೂರ್ಣವಾದ ಅಲ್ಪ ಬದುಕಿಗಿಂತ, ಅನ್ನೊಬ್ಬರ ಸುಖಕ್ಕಾಗಿ ನಾವು ಬದುಕುವ ಬದುಕು ಮಹತ್ವದ್ದು ತಾನೆ? ಭಯೋತ್ಪಾದನೆ, ಗಲಬೆ, ಧೊಂಬಿ, ಇದೆಲ್ಲ ಯಾಕಾಗಿ..ಇನ್ನ್ಯಾರದೋ ಬದುಕನ್ನು ನಾಶ ಮಾಡುವ ಹಕ್ಕನ್ನು ಯಾರೂ ಹೊಂದಿಲ್ಲ. ಇನ್ನೊಬ್ಬರ ನೋವಿನಲ್ಲಿ ವಿಕಟ ಅಟ್ಟಹಾಸ ಮೆರೆಯುವ, ವಿಕೃತ ಆನಂದ ಪಡೆಯುವ ಹೀನ ಬದುಕಿಗೆ ಅರ್ಥವೇನು? ನಿನ್ನೆ ಹುಟ್ಟಿ ಇಂದು ಬದುಕಿ ನಾಳೆ ಸಾಯಲೇ ಬೇಕಾದ ನಮಗೆ ಇನ್ನೊಬ್ಬರ ನೋವಿಗೆ ಸ್ಪಂದಿಸುವ ಗುಣವಿರಬೇಕೇ ಹೊರತು ಇನ್ನೊಬ್ಬರ ಬದುಕನ್ನು ನಾಶ ಮಾಡುವ ಮತಿ ವಿಕಲತೆಯಲ್ಲ. ಏನೆನ್ನುತ್ತೀರಿ?……

Advertisements

Responses

 1. hey… ninna baravaNigeya language thumbaa professional aagide…
  really u can make woders in ur writings

 2. ನಿಮ್ಮ ಬರವಣಿಗೆ ಚೆನ್ನಾಗಿದೆ.. ಹೌದು ನೀವು ಹೇಳೋ ಹಾಗೆ ಕೆಲವೊಮ್ಮೆ ಬೇರೆಯವರಿಗೋಸ್ಕರ ನಾವು ಬದುಕಬೇಕಾಗುತ್ತದೆ… ನನಗೆ ಚಿತ್ರಳ ಪಾತ್ರ ಮನಸಿಗೆ ಹಿಡಿಸಿತು..ಅಷ್ಟು ಚಿಕ್ಕ ವಯಸ್ಸಲ್ಲೇ ಅಷ್ಟೊಂದು ಒಳ್ಳೆ ಬುದ್ದಿ ಇರೋದು ಹೋಗಳಬೇಕದಂತಹ ವಿಷಯ..
  ಚೆನ್ನಾಗಿದೆ ಮುಂದುವರೆಸಿ ನಿಮ್ಮ ಬರವಣಿಗೆ

 3. Thnaks for the comments. Keep reading svara ringana

 4. ಪ್ರೀತಿಯ ವಿಜಯ ರಾಜ್

  ತುಂಬಾ ದನ್ಯವಾದಗಳು. ನಿಮ್ಮಂಥವರ ಪ್ರೋತ್ಸಾಹವೇ ನಮ್ಮ ಬರವಣಿಗೆಗೆ ಸ್ಪೂರ್ತಿ. ನಿಮ್ಮ ಬರಹಗಳಿಗೆ ಹೋಲಿಸಿದರೆ, ನಮ್ಮ ಬರವಣಿಗೆಗಳು ಇನ್ನೂ ಬಲಿಯದ ಬೆಳೆಯದ ಹಸು ಕೂಸುಗಳು. ಮತ್ತೊಮ್ಮೆ, ದನ್ಯವಾದಗಳು.

 5. its very nice..thumba chennagide…nimma barvanigeya abhimaniyagi bitte.good

 6. Thanks Manjunath…Keep reading Svara ringana…

 7. super


ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

ವಿಭಾಗಗಳು

%d bloggers like this: