Posted by: pavankir | May 25, 2011

ಸಾಲು ಸಾಲಾಗಿ ಮೂಡಿದ್ದು…..

  1. ಜೊತೆಯಾಗಿ ಕುಳಿತು ಎರಡು ದಿನ ಪ್ರಯಾಣಿಸಿದ್ದರೂ, ಒಂದೂ ಮಾತಾಡಿರಲ್ಲಿಲ್ಲ, ಆದರೆ ಇಳಿಯುವಾಗ ಏನೋ ಕಳಕೊಂಡಂತೆ, ಈ ಭಾವ ಸಂಬಂಧಕ್ಕೆ ಹೆಸರರಿಯದೇ ತೆರಳಿದರು ತಮ್ಮ ಮನೆಗಳಿಗೆ.
  2. ಅವನು ಇವಳನ್ನು ಪ್ರೀತಿಸಿದ, ಪ್ರೀತಿಸುತ್ತಲೇ ದೂರಾದ; ಅವಳು ಅವನನ್ನು ಪ್ರೀತಿಸದೇ ದೂರಮಾಡಿ, ಈಗ ಅವನಿಲ್ಲದಿರುವಾಗ ಅವನಿಗೆ ಹತ್ತಿರವಾಗಿದ್ದಾಳೆ.
  3. ಮಗು ಮಣ್ಣಿನಲ್ಲಿ ಆಡಬಾರದೆಂದು ಬಣ್ಣ ಬಣ್ಣದ ಆಟಿಕೆಗಳ ನೀಡಿದರು, ಹೊರಗೆ ಹೋಗದಿರಲೆಂದು ಟಿ ವಿ ಕೊಟ್ಟರು, ಈಗ ಮಗು ಬೆಳೆದಿದೆ ಆದರೆ ತಾಯಿ ತಂದೆಯ ಜೊತೆ ಇಲ್ಲ, ಬಹುಶಃ ಅದಕ್ಕೆ ಕಂಪನ್ನು ಗ್ರಹಿಸುವ ಬೆರೆಯುವ ಗುಣ ಮರೆತಿರಬೇಕು.
  4. ಅವನೊಬ್ಬ ಲಂಪಟ, ಅಂತೂ ಮದುವೆಯಾದ, ಮನೆಯವರು-ಊರವರೆಲ್ಲಾ ನಿಟ್ಟುಸಿರು ಬಿಟ್ಟರು; ರಾತ್ರಿಯಲ್ಲಿ ಅವನಿಗೆ ಅವಳನ್ನು ಕಂಡ ನೆನಪು, ಕೇಳುವಂತಿರಲಿಲ್ಲ – ಪಾಪ ಸುಮ್ಮನಿರಲೂ ಆಗುತ್ತಿರಲಿಲ್ಲ.
  5. ಮನೆ ಮಠಾ ಬಿಟ್ಟುಬೈರಾಗಿಯಾದ ಅವನ ಪ್ರವಚನಕ್ಕೆ ಬಂದ ಬಾಲೆಗೆ ಅವನ ರೂಪ ರಾತ್ರಿ ನಿದ್ದೆ ಕೆಡಿಸಿತಂತೆ.
  6. ಊರಿಗೆ ತಿಂಗಳಿಗೊಮ್ಮೆ ಬರುತ್ತಿದ್ದ ಮಗ ಮದುವೆಯಾದ ಮೇಲೆ ವರುಷಕ್ಕೊಮ್ಮೆ ಬರಲಾರಂಭಿಸಿದ; ಈ ವರ್ಷ ಬಂದು ಹೋಗುವಾಗ ಅಮ್ಮನ ಸೆರಗು ಒದ್ದೆಯಾದದ್ದು ಕೈಯಲ್ಲಿ ದುಡ್ಡಿಡುವಾಗ ಅವನಿಗೆ ತಿಳಿಯಲಿಲ್ಲ..ಪಾಪ
  7. ಈಗ ಮಗನ ಬಟ್ಟೆ ತೊಳೆಯುವಾಗ, 25 ವರ್ಷದ ಹಿಂದೆ ಅಮ್ಮನ ಕೈ ನೋಯುತ್ತಿತ್ತೇ ಎಂದು ಕೇಳಬೇಕೆನಿಸಿತು; ಹಾಸಿಗೆ ಹಿಡದ ಅಮ್ಮನಲ್ಲಿ ಕೇಳಲು ಯಾಕೋ ಆಗಲಿಲ್ಲ – ಗಂಟಲು ಒಣಗುತ್ತಿತ್ತು.

Responses

  1. idu bari salugalla, chikka chikka kathegalu. chennagide. avanobba lampata & ottige prayanisuttiddaru tumba suuuuper…….


Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Connecting to %s

Categories

Follow

Get every new post delivered to your Inbox.