Posted by: pavankir | May 25, 2011
ಬೆಂಕಿ ಪೊಟ್ಟಣದ ಕಡ್ಡಿಗಳು….
ಇಂದು ಯಾಕೋ ಏನೋ ದೇವರಿಗೆ ದೀಪ ಹಚ್ಚುವಾಗ ಒಂದಷ್ಟು ವಿಚಾರಗಳ ಸಾಲು ಹೊಳೆಯಿತು. ನಿಮ್ಮೊಂದಿಗೆ ಹಂಚಿಕೊಳ್ಳುವ ಇರಾದಯೇ ಈ ಲೇಖನ. ನಾವೆಲ್ಲರೂ ನೋಡುವ ಬೆಂಕಿ ಪೊಟ್ಟಣ ಮತ್ತು ಅದರ ಕಡ್ಡಿಗಳು; ಅದನ್ನು ಸ್ವಲ್ಪ ಸೂಕ್ಷ್ಮವಾಗಿ ನೋಡಿದರೆ ಎಂತಹ ವಿಚಾರಗಳು ತಲೆದೋರುತ್ತದೆ. ನಿರ್ದಿಷ್ಟವಾದ ಕಡ್ಡಿಗಳ ಲೆಕ್ಕ ಇಲ್ಲದೇ ಇದ್ದರೂ ಅವುಗಳ ಆಕಾರ ನಮಗೆ ಗ್ರಹ್ಯ. ಕೆಲವು ಸ್ವಲ್ಪ ದೊಡ್ಡದು, ಮತ್ತೆ ಕೆಲವು ತೀರಾ ತೆಳು, ಕೆಲವಕ್ಕೆ ತಲೆ ದೊಡ್ಡ, ಮತ್ತೆ ಕೆಲವಕ್ಕೆ ತುದಿ ಮೊದಲಿಲ್ಲ, ಹೀಗೆಯೇ ಏನೆನೋ ಆಕಾರಗಳು.
ನಾವು ಬೆಂಕಿ ಪೊಟ್ಟಣದಿಂದ ಯಾವುದಾದರೂ ಒಂದು ಕಡ್ಡಿಯನ್ನು ಹೊರ ತೆಗೆದು ಉರಿಸುತ್ತೇವೆ. ಯಾವ ಕಡ್ಡಿಯನ್ನು ಹೊರ ತೆಗೆಯಬೇಕೆಂಬ ನಿರ್ಣಯವಿರುವುದಿಲ್ಲ, ಹಾಗೆಯೇ ಎಷ್ಟು ಕಡ್ಡಿಗಳನ್ನು ಹೊರ ತೆಗೆಯಬೇಕೆಂಬ ನಿರ್ಣಯವೂ ಇರುವುದಿಲ್ಲ. ನಾವು ಬೆಂಕಿ ಕಡ್ಡಿಗಳನ್ನು ಬೇರೆ ಬೇರೆ ಕಾರಣಗಳಿಗೆ ಉಪಯೋಗಿಸುತ್ತೇವೆ. ದೇವರಿಗೆ ಮಂಗಳ ನೀರಾಜನ ಬೆಳಗಲು, ಉದರಾಗ್ನಿ ಶಮನಕ್ಕೆ ಅಡುಗೆ ಮಾಡಲು, ಬೆಳಕಿಗಾಗಿ ದೀಪ ಉರಿಸಲು, ಅಷ್ಟೇ ಯಾಕೆ ಬೀಡಿ ಹಚ್ಚಲು, ಹೀಗೆ ಹತ್ತು ಹಲವಾರು. ಎಲ್ಲ ಕಡ್ಡಿಗಳು ಉರಿದು ಬಸ್ಮವಾಗಲೇ ಬೇಕಾದರೂ, ಯಾವುದು ಯವಾಗ ಎಂಬ ಪ್ರಶ್ನೆಗೆ ಉತ್ತರ ನಮ್ಮಲ್ಲಿಲ್ಲ. ಕಡ್ಡಿಗಳನ್ನು ತಯಾರಿಸುವಲ್ಲಿನ ಉದ್ದೇಶ ಒಳ್ಳೆಯದೇ ಆದರೂ, ಕೆಲವು ಕಡ್ಡಿಗಳು ಇನ್ನೊಬ್ಬರ ಮನೆ ಸುಡಬಹುದು, ಮತ್ತೆ ಕೆಲವು ಕೆಲವರ ಹೆಣ ಸುಡಬಹುದು.
ಬೆಂಕಿ ಕಡ್ಡಿಗಳನ್ನು ನಮ್ಮ ಬದುಕೆಂದು ತಿಳಿದು, ಬೆಂಕಿ ಪೊಟ್ಟಣವನ್ನು ನಮ್ಮ ಕುಟುಂಬವೆಂದು ತಿಳಿದರೆ ಅರೆ ಕ್ಷಣ ಸೋಜಿಗವಾಗುತ್ತದೆ. ಯಾವ ಕಡ್ಡಿ ಯಾವ ಪೊಟ್ಟಣ ಸೇರುತ್ತದೋ ತಿಳಿಯದು. ಕೆಲವರು ಒಳ್ಳೆಯ ಕಾರಣಕ್ಕಾಗಿ ಬಳಕೆಯಾಗುತ್ತೇವೆ. ಮತ್ತೆ ಕೆಲವರು ವಿನಾ ಕಾರಣ ಜೀವನ ಮುಗಿಸುತ್ತೇವೆ. ಎಂದಿಗೆ ನಮ್ಮ ಜೀವನ ಮುಗಿಯುತ್ತದೋ ತಿಳಿದಿರುವುದಿಲ್ಲ. ಒಂದೊಂದು ದಿನ ತಪ್ಪಿದಾಗಲು ನಾವು ಅಮರರೆಂಬ ಭಾವ ಮೊಳೆಯುತ್ತಿರುತ್ತದೆ. ಎಂದಿಗಾದರು ಈ ಕಾಯ ಎರವಿನ ಒಡವೆ ಎಂಬ ಸತ್ಯ ಅರ್ಥ ಆಗುವುದೇ ಇಲ್ಲ. ಪೊಟ್ಟಣದೊಳಗಿನ ಬದುಕೇ ಸರ್ವಸ್ವ ಅದೇ ಪ್ರಪಂಚವೆಂಬ ಭಾವ ಜೀವ ನದಿಯಲ್ಲಿ ಅಡಗಿರುತ್ತದೆ. ಒಳ್ಳೆಯ ಕಾರಣಕ್ಕಾಗಿ ಒಳ್ಳೆಯವರ ಕೈಗೆ ನಮ್ಮ ಕಡ್ಡಿ ಸಿಗುವಂತಾಗಲಿ ಎಂಬ ಪ್ರಾರ್ಥನೆಯೂ ನಮ್ಮ ಮನದಲ್ಲಿ ಮೂಡುವುದಿಲ್ಲ.
ಈ ಕಿರು ಲೇಖನದ ವಿಚಾರ ಧಾರೆಯ ಕುರಿತು ನಿಮ್ಮ ಅಭಿಪ್ರಾಯ ತಿಳಿಸಿ..
Like this:
One blogger likes this post.
nijavaglu chennagide nimma yochan lahari. navu yava kaddino, nammannu yavaga oristaro gottilla. Good pavan keep it up
By: Praveen on May 26, 2011
at 11:32 am
ye really good..
By: ashok on May 26, 2011
at 12:56 pm
Hi Pavan,
super, good thought.
By: Subrahmanya on May 26, 2011
at 7:08 pm