ಬೆಂಗಳೂರಿನ ಜಯನಗರದ ಒಂದು ಮದುವೆ ಮನೆಯಲ್ಲಿ ಚಂಡೆ ಮದ್ದಳೆಗಳ ನಾದ. ಆಶ್ಚರ್ಯಕ್ಕೆ ಅವಕಾಶವೇ ಇಲ್ಲ. ಮೊನ್ನೆಯಷ್ಟೇ ಜಯನಗರದ ಶಿವಶಕ್ತಿ ಕನ್‌ವೆನ್ಶನ್ ಹಾಲ್ನಲ್ಲಿ ತೆಲುಗು ಮೂಲದ ಶ್ರೀ ನಂಜುಂಡ ಸ್ವಾಮಿಯವರ ಮಗಳ ಮದುವೆಯಲ್ಲಿ ಯಕ್ಷಗಾನದ ಸಂಬ್ರಮ. ಕನ್ನಡ ವಿನಾಶದ ಅಂಚಿನಲ್ಲಿದೆ ಎನ್ನುವ ವಾದಕ್ಕೆ ಈ ಕಾರ್ಯಕ್ರಮ ಒಂದು ಉತ್ತರವಾಗಿತ್ತು.

“ಸುರಭಿ ಯಕ್ಷಕಲಾ ಪಲ್ಲವ ಯಲಗುಪ್ಪಾ” ಇವರು ಪ್ರಸ್ತುತ ಪಡಿಸಿದ “ಮನಸೆಳೆವ ಮದುಮಾಸ” ಕಾರ್ಯಕ್ರಮ ಬಹಳಷ್ಟು ವಿಶೇಷತೆಗಳಿಂದ ಕೂಡಿ ಯಕ್ಷಗಾನದ ಹೊಸ ಆಯಾಮವನ್ನು ತೋರಿಸಿಕೊಟ್ಟಿತು. ಗಣಪತಿ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮ ನಂತರದಲ್ಲಿ ನವ ದಂಪತಿಗಳ ಜೀವನದ ವಿವಿದ ಕಾಲಗಟ್ಟವನ್ನು ಯಕ್ಷಗಾನೀಯವಾಗಿ ತೋರಿಸಿಕೊಟ್ಟಿತು. ಮದುಮಕ್ಕಳು ಮಧುಚಂದ್ರಕ್ಕೆ ಹೋಗುವ ಸನ್ನಿವೇಶವನ್ನು ವನವಿಹಾರ, ಜಲಕ್ರೀಡೆಗಳ ಮೂಲಕ ತೋರಿಸಿ ಮಧು ಮಂಟಪದ ಪ್ರತಿ ಸೃಷ್ಟಿಯನ್ನು ಮಾಡಿತ್ತು. ಸರಸ ವಿರಸಗಳು ಸಂಸಾರದ ಸಾರ ಎಂಬುದನ್ನು, ಕೃಷ್ಣ ಸತ್ಯಭಾಮೆಯರ ನವಿರಾದ ಸರಸ, ಹಾಗೂ ಕಂಡು ಕಾಣದ ವಿರಸದ ಸನ್ನಿವೇಷದ ಮೂಲಕ ಪ್ರದರ್ಶಿಸಿತು. ಈ ನಡುವೆ ಸುದನ್ವಾರ್ಜುನ ಪ್ರಸಂಗದ ಒಂದು ವೀರರಸದ ಒಂದು ಸನ್ನಿವೇಶವನ್ನು ಪ್ರದರ್ಶಿಸಲಾಯಿತು.

ಕನ್ನಡ ಬಾಷೆ, ಸಂಸ್ಕ್ರತಿಯ ಆನಾವರಣಗೊಂಡು ಕಾರ್ಯಕ್ರಮ ಐ ಟಿ ನಾಡಿನಲ್ಲಿ ವಿಜೃಂಬಿಸಿತು. ಕಲಾವಿದರಾಗಿ ಶ್ರೀ ಕಣ್ಣೀಮನೆ ಗಣಪತಿ ಭಟ್, ಶ್ರೀ ಯಲಗುಪ್ಪ ಸುಬ್ರಮಣ್ಯ ಹೆಗಡೆ, ಶ್ರೀ ಶಶಾಂಕ ಕಾಶಿ, ಶ್ರೀ ಪ್ರಶಾಂತ ವರ್ದನ ರವರು ಭಾಗವಹಿಸಿದ್ದರು. ಹಿಮ್ಮೇಳದಲ್ಲಿ ಭಾಗವತರಾಗಿ ಶ್ರೀ ಸರ್ವೇಶ್ವರ ಹೆಗಡೆ ಮೂರೂರು, ಚಂಡೆಯಲ್ಲಿ ಶ್ರೀ ಅಮೃತದೇವ, ಮದ್ದಳೆಯಲ್ಲಿ ಶ್ರೀ ರಾಜೇಶ್ ಆಚಾರ್ಯರವರು ಸಹಕರಿಸಿದ್ದರು.

ಈ ಕಾರ್ಯಕ್ರಮದ ಒಂದಿಷ್ಟು ಚಿತ್ರ ಸುದ್ದಿಗಳು ನಿಮಗಾಗಿ…..

ನೀಲ ಗಗನದೊಳು ಮೇಘಗಳ......

ನೀಲ ಗಗನದೊಳು ಮೇಘಗಳ......

 

ಸ್ವತಃ ನಾನೇ..ನಿರೂಪಕನಾಗಿ..

ಸ್ವತಃ ನಾನೇ..ನಿರೂಪಕನಾಗಿ..

 

ಮಾಮರವು ಪೂತಿದೆ...ಹೆಗಲೇರಿ ನಿಂತಿದೆ..

ಮಾಮರವು ಪೂತಿದೆ...ಹೆಗಲೇರಿ ನಿಂತಿದೆ..

 

ಸೃಷ್ಟಿಗರ್ಜುನ ನೀನೊ..

ಸೃಷ್ಟಿಗರ್ಜುನ ನೀನೊ..

 

ಆರರೇ ಎನ್ ಅಚ್ಚರಿಯೋ...

ಆರರೇ ಎನ್ ಅಚ್ಚರಿಯೋ...

 

ಸ್ಮೇರ ಮುಖನಾದ ಹರಿ...

ಸ್ಮೇರ ಮುಖನಾದ ಹರಿ...

 

ಹಿಮ್ಮೇಳದ ಸರಿಗಮ...

ಹಿಮ್ಮೇಳದ ಸರಿಗಮ...

 

ಕಾರ್ಯಕ್ರಮದ ಮುಕ್ತಾಯದ ಕ್ಷಣ...

ಕಾರ್ಯಕ್ರಮದ ಮುಕ್ತಾಯದ ಕ್ಷಣ...

||ಯಕ್ಶಗಾನಮ್ ಗೆಲ್ಗೆ||

ಯಕ್ಷಗಾನಕ್ಕೆ ಸಂದ ಗೌರವ….

ಉಬಯ ತಿಟ್ಟುಗಳ ದ್ರುವತಾರೆ ಯಲಗುಪ್ಪ ಸುಬ್ರಮಣ್ಯ ಹೆಗಡೆಯವರಿಗೆ ಇತ್ತೀಚಿಗೆ ಕರ್ನಾಟಕ ಕಲಾರತ್ನ ಪ್ರಶಸ್ತಿ ಲಭಿಸಿತು. ಬೆಂಗಳೂರಿನಲ್ಲಿ ನೆಡೆದ ಸಮಾರಂಭದಲ್ಲಿ ಗಣ್ಯರಾದ B T ಲಲಿತಾ ನಾಯಕ್, ಕವಿ ಸಿದ್ದಲಿಂಗಯ್ಯ , ಚಿತ್ರ ತಾರೆಯಾರಾದ ದ್ವಾರಕೀಶ್, M N ಸುರೇಶ್, ಮುಂತಾದವರ ಉಪಸ್ಥಿತಿಯಲ್ಲಿ ನೀಡಿ ಗೌರವಿಸಲಾಯಿತು.

ಇದು ಯಕ್ಷಗಾನಕ್ಕೆ ಸಂದ ಗೌರವ.. ಈ ಸಂದರ್ಭದ ಕೆಲವು ಚಿತ್ರ ಸುದ್ದಿಗಳು ನಿಮಗಾಗಿ….

ಪ್ರಶಸ್ತಿ ಸ್ವೀಕರಿಸುತ್ತಿರುವ ಅಮೂಲ್ಯ ಕ್ಷಣ..

ಪ್ರಶಸ್ತಿ ಸ್ವೀಕರಿಸುತ್ತಿರುವ ಅಮೂಲ್ಯ ಕ್ಷಣ..

 

ಚೆಲುವಿನಾ ಸಿಂಗಾರಿ....ಚೆಲುವೆಲ್ಲಾ ನಿನದೇ..

ಚೆಲುವಿನಾ ಸಿಂಗಾರಿ....ಚೆಲುವೆಲ್ಲಾ ನಿನದೇ..

ಕೋಗಿಲೆಯ ಗಾನವೋ..ನವಿಲ ನಾಟ್ಯವೋ...

ಕೋಗಿಲೆಯ ಗಾನವೋ..ನವಿಲ ನಾಟ್ಯವೋ...

 

ಆಹಾ ಎಂತ ಸಂತಸ..ಎಂತ ಉಲ್ಲಾಸ..

ಆಹಾ ಎಂತ ಸಂತಸ..ಎಂತ ಉಲ್ಲಾಸ..

Posted by: pavankir | June 5, 2009

ವೃಕ್ಷ ರಾಜಾಯತೇ ನಮಃ||

ಗೆಳೆಯರೆ, ತುಂಬಾ ದಿನಗಳಿಂದ ಬರವಣಿಗೆ ಸ್ಥಗಿತಗೊಂಡಿತ್ತು. ಕ್ಷಮೆಯಿರಲಿ. ವಿಶ್ವ ಪರಿಸರ ದಿನಾಚರಣೆಯ ಹಿನ್ನೆಲೆಯಲ್ಲಿ, ಪರಿಸರದೊಂದಿಗೆ ಬಹಳಷ್ಟು ಒಡನಾಟವಿರಿಸಿಕೊಂಡು ಬೆಳೆದ ನನಗೆ ಹೀಗೇ ತೋಚಿದ್ದು ಗೀಚುವ ಮನಸ್ಸಾಯ್ತು. ಅಭಿಪ್ರಾಯ ತಿಳಿಸಿ, ಮತ್ತಷ್ಟು ಹುಮ್ಮಸ್ಸಿನಿಂದ ಬರೆಯುತ್ತೇನೆ.

ದಶಕೂಪ ಸಮೋವಾಪಿ, ದಶವಾಪೀ ಸಮೋಹ್ರದಃ|
ದಶ ಹ್ರದಸ್ಸಮಃ ಪುತ್ರೋ, ದಶಪುತ್ರಃ ಸಮೋದ್ರುಮಃ||

ಅಂದರೆ, “ಒಂದು ಕೆರೆ ಹತ್ತು ಬಾವಿಗಳಿಗಿಂತ ಉತ್ತಮ, ಒಂದು ಸರೋವರ ಹತ್ತು ಕೆರೆಗಳಿಗಿಂತ ಉತ್ತಮ, ಹತ್ತು ಸರೋವರಗಳಿಗಿಂತ ಒಬ್ಬ ಸುಪುತ್ರನನ್ನು ಪಡೆಯುವುದು ಉತ್ತಮ, ಇದೆಲ್ಲಕ್ಕಿಂತಲೂ, ಒಂದು ವ್ರೂಕ್ಶವನ್ನು ಬೆಳೆಸುವುದು ಹತ್ತು ಸುಪುತ್ರರನ್ನು ಪಡೆಯುವುದುಕ್ಕಿಂತ ಉತ್ತಮ”. ಮನುಷ್ಯನ ಬದುಕು ನಿರ್ಬರವಾಗಿರುವುದು ಪ್ರಕೃತಿಯ ಮೇಲೆ. ಪರಿಸರ ತನ್ನೆಲ್ಲಾ ಕೊಡುಗೆಗಳನ್ನು ಕೊಟ್ಟು ನಮ್ಮನ್ನು ಬೆಳೆಸುತ್ತದೆ. ಪರಿಸರ ಎಂದಾಗ ಕೇವಲ ವ್ರೂಕ್ಶ ಸಂಪತ್ತು ಮಾತ್ರವಲ್ಲ, ಆದರೆ ಉಳಿದ ಎಲ್ಲಾ ಸಂಪತ್ತಿಗೂ ವೃಕ್ಷಸಂಪತ್ತೇ ಆದಾರವಾಗಿರುವುದರಿಂದ ಪರಿಸರವೆಂದಾಕ್ಷಣ ಮರದ ಕಲ್ಪನೆ ಮೂಡುತ್ತದೆ. ನಮ್ಮ ಸಂಸ್ಕೃತಿ ಪರಿಸರಕ್ಕೆ ನೀಡಿದ ಪ್ರಾಧಾನ್ಯತೆಯನ್ನು ಬೇರಾವುದಕ್ಕೂ ನೀಡಿಲ್ಲ.

 ವ್ಱೂಕ್ಶ ಸಂಪತ್ತು ನಮಗೆ ದೇವರು, ವನ್ಯ ಮೃಗಗಳು ನಮಗೆ ಪರೋಕ್ಷ ದೇವರು, ಹರಿಯುವ ನದಿ ನಮಗೆ ತಾಯಿ, ಹಾರಡುವ ಪಕ್ಷಿ ನಮ್ಮ ದೇವರ ವಾಹನ, ಕೊನೆಗೆ ವಿಧ್ವಂಸಕಗಳಾದ ಇಲಿಯೂ ದೇವರೆ. ಇಲ್ಲಿ ದೇವರೆಂಬ ವಿಷಯದ ಕುರಿತು ಚರ್ಚೆ ಬೇಡ. ಆದರೆ ನಮ್ಮ ಸುತ್ತಮುತ್ತಲಿನ ಎಲ್ಲಾ ಚರಾಚರಗಳನ್ನು ಮಾನವಾತೀತ ಶಕ್ತಿಯ ಸ್ಥಾನದಲ್ಲಿರಿಸಿರುವುದು ಅವುಗಳ ವಿಶೇಷತೆಯನ್ನು ತಿಳಿಸುತ್ತದೆ, ಹಾಗೆಯೇ ಅವುಗಳಿಂದಲೇ ನಮ್ಮ ಬದುಕು ಎಂಬ ಸರಳ ಸತ್ಯವನ್ನು ತಿಳಿಸುತ್ತದೆ. ಈ ವೃಕ್ಷಗಳನ್ನು ನಮ್ಮವರು ಆರು ಬಗೆಯಾಗಿ ವಿಂಗಡಿಸಿದ್ದಾರೆ -

  • ಔಷಧಿ – ಅರ್ಥಾತ್ ಜೀವನವಾರಿ ಸದೃಶವಾದದ್ದು, ಭತ್ತ, ರಾಗಿ ಇತ್ಯಾದಿ.
  • ವನಸ್ಪತಿ – ಹೂ ಬಿಡದೆ ಹಣ್ಣು ಬಿಡುವ ಹೆಮ್ಮರಗಳು, ಉದಾ: ಅಶ್ವತ್ಥ, ಹಲಸು…ಇತ್ಯಾದಿ
  • ದ್ರುಮಾಃ – ಹೂ ಬಿಟ್ಟು ಹಣ್ಣು ಬಿಡುವವು, ಉದಾ: ಮಾವು, ತೆಂಗು, ಅಡಿಕೆ..ಇತ್ಯಾದಿ
  • ಲತಾ – ಬಳ್ಳಿಗಳು, ಮಲ್ಲಿಗೆ, ಅವರೇ, ಇತ್ಯಾದಿ
  • ತ್ವಗ್ಗಿರಾಃ – ಬೆತ್ತ, ಬಿದಿರುಗಳಂತವು.

 ಪರಿಸರ ಮನುಷ್ಯನಿಗೆ ತನ್ನೆಲ್ಲಾ ಕೊಡುಗೆಗಳನ್ನು ನೀಡಿದೆ. ಕುಡಿಯಲು ಜಲ, ಬದುಕಲು ನೆಲ, ಉಸಿರಾಡಲು ಶುದ್ಧ ಗಾಳಿ, ಹೀಗೆ ಹತ್ತು ಹಲವು. ಪ್ರಕೃತಿ ವೈಜ್ಞಾನಿಕತೆಗೂ ಮೀರಿ, ಎಲ್ಲವನ್ನೂ ವ್ಯವಸ್ಥಿತವಾಗಿರಿಸಿದೆ. ತನ್ನ ಗರ್ಭದಲ್ಲಿ ಹುಟ್ಟುವ ಪ್ರತಿಯೊಂದು ಜೀವಿಗೂ ಅಲ್ಲಲ್ಲೇ ಬದುಕಲು ಆಹಾರಾದಿಗಳನ್ನು ಓದಕಿಸಿದೆ. ತನ್ನ ಸಮತೋಲನವನ್ನು ಕಾಪಾಡಲು ಜೀವಚಕ್ರವನ್ನು ನಿರ್ಮಿಸಿದೆ. ತನ್ನ ನಿರಂತರತೆಯನ್ನು ಕಾಪಿಟ್ಟುಕೊಳ್ಳಲು ಗಂಡು ಹೆಣ್ಣೆಂಬ ಪ್ರತ್ಯೇಕತೆಯನ್ನು ಸೃಷ್ಟಿಸಿದೆ. ವಿಜ್ಞಾನ ತನ್ನ ಶೋಧದಿಂದ ಬಯಲು ಮಾಡಲಾಗದ ಅದೆಷ್ಟೋ ವಿಚಿತ್ರಗಳನ್ನು ತನ್ನೋಳಗೆ ಹುದುಗಿಸಿಕೊಂಡಿದೆ. ನಮ್ಮ ಪೂರ್ವಜರು ಪರಿಸರದೊಂದಿಗೆ ಹೊಂದಿದ್ದ ಅನುಬಂಧವನ್ನು ನಾವಿಂದು ಹೊಂದಿಲ್ಲ. ಮುಂದಿನ ನಮ್ಮ ತಲೆಮಾರು ಪರಸರದ ಕುರಿತಾದ ಅರಿವನ್ನೇ ಹೊಂದಿರುವುದಿಲ್ಲ. ಜನ್ಮ ಕೊಟ್ಟ ತಾಯನ್ನೇ ಮರೆಯುವ ನಾವು ಜೀವನ ಕೊಟ್ಟ ಪರಿಸರವನ್ನು ಮರೆತರೆ ಅಚ್ಚರಿಯೇನು?! 

ದರೆಗುರುಳಿದ ವನದೇವಿ..!

ದರೆಗುರುಳಿದ ವನದೇವಿ..!

 

ಮನುಷ್ಯ ಎಂಬ ಶಬ್ದವು ಗುಣವಾಚಕ. ಮನುಕುಲದಲ್ಲಿ ಹುಟ್ಟಿದ ಮಾತ್ರಕ್ಕೆ ಒಬ್ಬ ಮಾನವನಾಗಬಹುದೇ ಹೊರಟು, ಮನುಷ್ಯನಾಗಲಾರ. ಯಾವನು ಮನೀಷಿಯೋ ಅವ್ನು ಮಾತ್ರವೇ ಮನುಷ್ಯನಾಗುತ್ತಾನೆ. ಅಂದರೆ, ಯಾವನು ಪ್ರಜ್ನೆಯುಳ್ಳವನೋ, ವಿವೇಕಶಾಲಿಯೋ ಅವನು ಮಾತ್ರವೇ ಮನುಷ್ಯನು. ಆದರೆ ಪ್ರಜ್ಞಾಪೂರ್ಣ, ವಿವೇಕಶಾಲಿ ಮನುಷ್ಯ ತನ್ನ ಅಮಿತವಾದ ಆಸೆಯನ್ನು ಇಡೇರಿಸಿಕೊಳ್ಳುವುದಕ್ಕೆ ಪರಿಸರದ ಮೇಲೆ ಪ್ರಹಾರ ಮಾಡುತ್ತಾನೆ. ಸಹನಾ ಮೂರ್ತಿಯಾದ ಪರಿಸರ ಆವಾಗಲೇ ತನ್ನ ಪ್ರಭಾವವನ್ನು ತೋರಿಸುವುದು. ಚಂಡಮಾರುತ, ಕ್ಷಾಮ, ತ್ಸುನಾಮಿಯೇ ಮೊದಲಾದ ಮಾರಣಹೋಮ ನೆಡೆಯುವುದು ಈ ಕಾರಣದಿಂದ. ತನ್ನ ಮೈಗೆ ಕಲ್ಲೆಸೆದವರಿಗೆ ತಿರುಗಿ ಹಣ್ಣನ್ನು ನೀಡುವ ಮರವನ್ನು ಮುಲಾಜಿಲ್ಲದೇ ಕಡಿಯುವವರು ನಾವು. ಯಾವ ಭೂಗರ್ಭದಲ್ಲಿ ಬಂಗಾರ ದೊರೆಯುವುದೋ ಅದೇ ಭೂಗರ್ಭವನ್ನು ಬರಿದಾಗಿಸಹೊರಟವರು ನಾವು. ಛೇ!! ಹೆತ್ತ ತಾಯ ಕರುಳ ಬಾಗೇವ ನೀಚರು ನಾವು…!

ಗೆಳೆಯರೇ, ನಾವು ನಮ್ಮ ಮುಂದಿನ ಪೀಳಿಗೆಯನ್ನು ಕಾಣಬೇಕಾದರೆ, ನಮ್ಮ ಈ ದರಣಿಯನ್ನು ಮುಂದಿನವರಿಗಾಗಿ ಉಳಿಸಲೇಬೇಕಾಗಿದೆ. ಈ ಕುರಿತು ನಾವು ಮಾಡುವ ಕಾರ್ಯದ ಕುರಿತು ಚಿಂತನೆ ಅಗತ್ಯ. ಬರೀ ಮಾತು ಯಾ ಒಂದು ಲೇಖನ ಪ್ರಯೋಜನಕ್ಕೆ ಬಾರದು. ಇದು ಸಾರ್ಥಕವಾಗುವುದು ನಾವು ಈ ನಿಟ್ಟಿನಲ್ಲಿ ಒಂದು ದಿಟ್ಟ ಹೆಜ್ಜೆಯಿಟ್ಟಾಗ. ಆದುದರಿಂದ ಗೆಳೆಯರೇ, ನಾವು ನೀವೆಲ್ಲಾ ಮಾಡಬೇಕಾದದ್ದು ಏನೆಂದರೆ –

  • ನಾವು ವರ್ಷಕ್ಕೆ ಒಂದಾದರೂ ಗಿಡ ನೆಡಬೇಕು.
  • ಸೌಕರ್ಯ ಇಲ್ಲದವರು ಗಿಡ ನೆಡುವವರನ್ನಾದರೂ ಪ್ರೋತ್ಸಾಹಿಸಬೇಕು.
  • ನಮ್ಮ ಮಕ್ಕಳಿಗೆ ಪರಿಸರದ ಮಹತ್ವವನ್ನು ವಿವರಿಸಬೇಕು.
  • ನಮಗೆ ತಿಳಿದಷ್ಟು ಮರ-ಗಿಡ, ಪ್ರಾಣಿ-ಪಕ್ಷಿಗಳ ಬಗ್ಗೆ ನಮ್ಮ ಮಕ್ಕಳಲ್ಲಿ ಅರಿವು ಮೂಡಿಸಬೇಕು.
  • ಒಟ್ಟಾರೆ ನಮ್ಮ ನೆಲ-ಜಲ ಸಂರಕ್ಷಣೆಗೆ ಪಣ ತೊಡಬೇಕು.

ನಿಮ್ಮ ಅಭಿಮತವನ್ನು, ಈ ನಿಟ್ಟಿನಲ್ಲಿ ನಿಮ್ಮ ಹೆಜ್ಜೆಯನ್ನು ತಪ್ಪದೇ ತಿಳಿಸಿ…..

Older Posts »

Categories